Hijab Controvercy : ಉಪನ್ಯಾಸಕಿಗೆ ಬುಲ್ ಶಿಟ್ ಎಂದು ಅವಮಾನಿಸಿದ ಹಿಜಬ್ ಧಾರಿ ವಿದ್ಯಾರ್ಥಿನಿ
ಉಡುಪಿ : ಹಿಜಾಬ್ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.. ಒಂದೆಡೆ ರಾಜಕೀಯ ತಿರುವು ಪಡೆದುಕೊಂಡಿದೆ.. ಮತ್ತೊಂದೆಡೆ ಹಿಂಸಾಚಾರ ಭುಗಿಲೆದ್ದಿದೆ.. ಈ ನಡುವೆ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದ ಉಪನ್ಯಾಸಕಿಗೆ ಹಿಜಾಬ್ ಧಾರಿ ವಿದ್ಯಾರ್ಥಿಯಿನಿಯೊಬ್ಬಳು ಬುಲ್ ಶಿಟ್ ಎಂದು ಕಿರುಚಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ..
Hijab Controversy: ಇಂದು ಹೈಕೋರ್ಟ್ನಲ್ಲಿ ಹಿಜಾಬ್ ಪ್ರಕರಣದ ತೀರ್ಪು?
ಎಂಜಿಎಂ ಕಾಲೇಜಿನಲ್ಲಿ ಪನ್ಯಾಸಕಿಗೆ ಅವಮಾನವಾಗಿರುವ ಘಟನೆ ನಡೆದಿದೆ.. ವಿದ್ಯಾರ್ಥಿನಿಯರಿಗೆ ಬುದ್ದಿವಾದ ಹೇಳಲು ಹೋದ ನಯನಾ ಎಂಬ ಉಪನ್ಯಾಸಕಿಗೆ ಹಿಜಬ್ ಧಾರಿ ವಿದ್ಯಾರ್ಥಿನಿ ಬುಲ್ ಶಿಟ್ , ಡೋಂಟ್ ಟಚ್ ಮಿ ಎಂದು ಕಿರುಚಾಡಿ ಅವಮಾನಿಸಿದ್ದಾಳೆ. ನಿನ್ನೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗ್ತಿದ್ದು , ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿ ವಿರುದ್ಧ ಕ್ರೋಶ ಭುಗಿಲೆದ್ದಿದೆ.