ಕಡಲ ಅಬ್ಬರ – ಮೂರೇ ದಿನಕ್ಕೆ ಸ್ಥಗಿತಗೊಂಡ ತೇಲುವ ಸೇತುವೆ….
ಕರ್ನಾಟಕಲ್ಲೇ ಪ್ರಥಮ ಭಾರಿಗೆ ಆರಂಭವಾಗಿದ್ದ ತೇಲುವೆ ಸೇತುವೆ ಮೂರೇ ದಿನದಲ್ಲಿ ಸ್ಥಗಿತಗೊಂಡಿದೆ. ಅರಬ್ಬೀ ಸಮುದ್ರದ ಅಬ್ಬರ ಜೋರಾಗಿರುವುದರಿಂದ ಮಲ್ಪೆ ಬೀಚ್ ನಲ್ಲಿ ನಿರ್ಮಾಣವಾಗಿದ್ದ ತೇಲುವ ಸೇತುವೆ ವಾಟರ್ ಸ್ಪೋರ್ಟ್ಸ್ ನ್ನು ಸ್ಥಗಿತ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕಡಲಬ್ಬರದ ಹಿನ್ನಲೆಯಲ್ಲಿ ವಾಟರ್ ಸ್ಪೋರ್ಟ್ ಗಳನ್ನ ಬಂದ್ ಮಾಡಲಾಗಿದ್ದು, ನೀರಿಗೆ ಇಳಿಯದಂತೆ ಸೂಚನೆ ನೀಡಿದ್ದಾರೆ.
ಏಕಾ ಏಕಿ ಸಮುದ್ರದ ಅಬ್ಬರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸೇತುವೆಯನ್ನ ಕಳಚಲು ಸಾಧ್ಯವಾಗಲಿಲ್ಲ, ಹೀಗಾಗಿ ಸೇತುವೆಗೆ ಹಾನಿಯಾಗದಂತೆ ಸೇತುವೆಯ ಲಾಕ್ ಗಳ ಸಂಪರ್ಕ ಕಡಿತಗೊಳಿಸದ್ದೇವೆ, ಇದರಿಂದಾಗಿ ಕೆಲವು ಬ್ಲಾಕ್ ಗಳು ಸಮುದ್ರಲ್ಲಿ ತೇಲುತ್ತಿದ್ದವು ಇದನ್ನ ವೀಡಿಯೋ ಮಾಡಿದ ಸ್ಥಳಿಯರು ಸೇತುವೆಗೆ ಹಾನಿಯಾಗಿದೆ ಎಂದು ಕೆಲವರು ವೀಡಿಯೋ ಹರಿಬಿಟ್ಟಿದ್ದಾರೆ. ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ಹೇಳಿದ್ದಾರೆ…
udupi malpe floating bridge go scatter 3 days after inauguration








