ಹಿಜಾಬ್ ವಿವಾದ – ಉಡುಪಿ ಶಾಸಕ ರಘುಪತಿ ಭಟ್ ಗೆ ಬೆದರಿಕೆ ಕರೆ
ಹಿಜಾಬ್ ಕುರಿತ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದ ವಿವಾದ ಇಂದು ದೇಶಾದ್ಯಂತ ಹಬ್ಬುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಗೆ ವಿದೇದಿಂದ ಬೆದರಿಕೆ ಕರೆಗಳು ಬರುತ್ತಿವೆ. ವಿದೇಶದಿಂದ ಮತ್ತು ಕೆಲವೊಂದು ಲೋಕಲ್ ಕಾಲ್ ಗಳು ನಿರಂತರ ಬರುತ್ತಿದ್ದು ನಾವು ನಿನ್ನನ್ನು ನೊಡಿಕೊಳ್ಳುತ್ತೇವೆ ಎಂದು ಬೆದರಿಕೆ ಕರೆಗಳು ಬರುತ್ತಿವೆ.
ಈ ಕುರಿತಉ ಶಾಸಕ ರಘುಪತಿ ಭಟ್ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮೌಕಿಕವಾಗಿ ಮಾಹಿತಿ ನೀಡಿದ್ದಾರೆ.Udupi MLA Raghupathi Bhat has been receiving life threatening calls from abroad
ನನಗೆ ದೇವರಿದ್ದಾನೆ ಅವರೆ ನನ್ನ ಭದ್ರತೆ ಉಡುಪಿ ಕ್ಷೇತ್ರದ ಜನತೆಯೆ ನನ್ನ ಸೆಕ್ಯೂರಿಟಿ ಗಾರ್ಡ್. ಉಡುಪಿ ಎಸ್ ಪಿ ವಿಷ್ಣುವರ್ಧನ್ ಫೋನ್ ಮಾಡಿದ್ದಾರೆ. ಯಾವುದೇ ಸಂಘಟನೆಯಿಂದ ಪೋನ್ ಕರೆ ಬಂದಿಲ್ಲ ಹೈದ್ರಾಬಾದ್ ನಿಂದ ಒಬ್ಬ ಹುಚ್ಚ ಮಾತನಾಡಿದ್ದ ಅವನಿಗೆ ಇಪ್ಪತ್ತು ನಿಮಿಷ ಉತ್ತರ ಕೊಟ್ಟಿದ್ದೇನೆ ಎಂದು ಶಾಸಕರು ತಿಳಿಸಿದರು.
ಇಂತಹ ಬೆದರಿಕೆಗಳನ್ನು ನಾವು ಬಹಳ ನೋಡಿದ್ದೇವೆ ಅಂತಾ ಉಡುಪಿಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿ ಜಿಲ್ಲೆಯ ಮುಸಲ್ಮಾನರಿಂದ ಪ್ರತಿರೋಧ ಬಂದಿಲ್ಲ. ಉಡುಪಿ, ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ. ಉಡುಪಿಯ ಮುಸ್ಲಿಂ ಒಕ್ಕೂಟದ ಖಾಜಿಗಳು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ. ಕುರಿತು








