ಪರೀಕ್ಷೆಗೆ ಮತ್ತೆ ಹಿಜಾಬ್ ಧರಿಸಿಕೊಂಡು ಬಂದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು : ರಘುಪತಿ ಭಟ್
ಉಡುಪಿ: ಹಿಜಾಬ್ ಸಂಬಂಧ ಹೋರಾಟ ನಡೆಸಿದ ವಿದ್ಯಾರ್ಥಿನಿಯರು ಮುಂದಿನ ಪರೀಕ್ಷೆಗೆ ಮತ್ತೆ ಹಿಜಾಬ್ ಧರಿಸಿಕೊಂಡು ಬಂದರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಉಡುಪಿ ಶಾಸಕ ರಘುಪತಿ ಭಟ್ ಸೂಚಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರೆಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೇವು, ಆದರೆ ಪಡೆದಿರಲಿಲ್ಲ, ಇಂದು ಬೆಳಿಗ್ಗೆ 9:30ರ ಸುಮಾರಿಗೆ ಕಾಲೇಜಿಗೆ ಬಂದು ಹಿಜಾಬ್ ತೆಗೆದಿಟ್ಟು ಹಾಲ್ ಟಿಕೆಟ್ ಪಡೆದಿದ್ದಾರೆ. ನಂತರ ಎಕ್ಸಾಮ್ ಸೆಂಟರ್ ಗೆ ಹೋಗಿ ಡ್ರಾಮಾ ಮಾಡಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಹೇಳಿದ್ದೇನೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದೇನೆ. ಇವರೇನು ಹುಡಗಾಟಿಕೆ ಆಡುತ್ತಿದ್ದಾರಾ? ಇವರು ಮುಗ್ದ ಮಕ್ಕಳ್ಳಲ್ಲ ಹೈಕೋರ್ಟನ ಅರ್ಜಿದಾರರು ಎಂದರು.
ಈ ಮಕ್ಕಳ ಮೇಲೆ ಶಿಸ್ತುಮ, ಕ್ರಿಮಿನಿಲ್ ಕೇಸ್ ಹಾಕಬೇಕು. ತರಗತಿ ಅಟೆಂಡ್ ಆಗಿಲ್ಲ ವರೇನು ಪರೀಕ್ಷೆ ಬರೆಯುತ್ತಾರೆ? ಹಿಜಾಬ್ ಧರಿಸಲು ಬಿಟ್ಟರೂ ಪರೀಕ್ಷೆ ಬರೆಯುವುದಿಲ್ಲ. ನಮ್ಮ ಕಾಲೇಜಿನ ವಾತಾವರಣ ಕೆಡಿಸುವುದೇ ಇವರ ಉದ್ದೇಶ. ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದೇ ಇವರ ಉದ್ದೇಶ. ಈ ವಿದ್ಯಾರ್ಥಿನಿಯರು ಹೈಕೋರ್ಟಗಿಂತ ಮೇಲಾ ಎಂದು ಪ್ರಶ್ನಿಸಿದ್ದಾರೆ.