ಸಹಜ ಸ್ಥಿತಿಗೆ ಸಮುದ್ರ – ಕಡಲಿಗಿಳಿದ ಬೋಟ್ ಗಳು…
ಮಲ್ಪೆ: ಭಾರಿ ಮಳೆ ಗಾಳಿಯಿಂದಾಗಿ ಕಳೆದ ಏಳೆಂಟು ದಿನಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ. ಸಮುದ್ರ ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದ್ದು ದೋಣಿಗಳು ಮತ್ತೆ ಕಡಲಿಗಿಳಿದಿವೆ.
“ಮೀನುಗಾರಿಕೆ ಋತು ಆರಂಭಗೊಂಡ ಕೊಂಚ ಆದಾಯ ಗಳಿಸುವಷ್ಟರಲ್ಲೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಮೀನು ಗಾರಿಕೆಯನ್ನು ನಡೆಸದಂತಾಗಿತ್ತು. 8 ದಿನಗಳಲ್ಲಿ ನಿತ್ಯ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಹೊಡೆತ ಉಂಟಾಗಿತ್ತು.”
ಇದೀಗ ಮೀನುಗಾರಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಮೀನುಗಾರರು ಕಡಲಿಗಿಳಿಯಲು ಸಜ್ಜಾಗಿದ್ದಾರೆ. ಗುರುವಾರ ದಿಂದ ಉಳಿದ ಬೋಟ್‌ಗಳು ತೆರಳುವ ಸಾಧ್ಯತೆ ಇದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ತಿಳಿಸಿದ್ದಾರೆ.