ಹಾಸ್ಟೆಲ್ ಮೇಲಿಂದ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು
ಹಾಸ್ಟೆಲ್ ಮೇಲಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು, ಉಗಾಂಡ ಮೂಲದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಬಳಿಯ ಗೀತಂ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಉಗಾಂಡ ದೇಶದ 24 ವರ್ಷದ ಹಸೀನಾ ಮೃತ ದುರ್ದೈವಿಯಾಗಿದ್ದು, ಗೀತಂ ವಿಶ್ವವಿದ್ಯಾಲಯದ ಬಿಬಿಎ ವಿದ್ಯಾಭ್ಯಾಸ ಮಾಡುತ್ತಿದ್ದಳು. ಬಟ್ಟೆ ತರಲೆಂದು 7ನೇ ಮಹಡಿ ಮೇಲೆ ಹೋಗಿದ್ದ ಹಸೀನಾ ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ 6ನೇ ಮಹಡಿಯಿಂದ ಬಿದ್ದಿದ್ದಾರೆ.
ರಾತ್ರಿ 11 ಗಂಟೆ ವೇಳೆಗೆ ಹಾಸ್ಟೆಲ್ ಮಹಡಿಯ ಮೇಲೆ ಬಟ್ಟೆ ತರಲು ಹೋಗಿದ್ದಳು. ಶೀಟ್ ಮೇಲೆ ಬಿದ್ದಿದ್ದ ಬಟ್ಟೆ ತರಲು ಶೀಟ್ ಮೇಲೆ ಇಳಿದಾದ ಶೀಟ್ ಮುರಿದು 6 ನೇ ಮಹಡಿಯಿಂದ 1 ಮಹಡಿಗೆ ಬಿದ್ದಿದ್ದಾಳೆ.
ಕಾಲೇಜಿನಲ್ಲಿ ಆಗಾಗ ಬೇರೆ ರಾಜ್ಯದ ವಿದ್ಯಾರ್ಥಿಗಳ ನಡುವೆ ಜಗಳ ನಡೆಯುತ್ತಿದ್ದು, ಹಸೀನಾ ಮಹಡಿಯಿಂದ ಬಿದ್ದು ಗಾಯಗೊಂಡಾಗ ಕಾಲೇಜಿನ ಆಡಳಿತ ಮಂಡಳಿ ಆಸ್ಪತ್ರೆಗೆ ಸೇರಿಸಲು ವಿಳಂಬ ಮಾಡಿದೆ ಎಂದು ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಾಸ್ಟೆಲ್ ಕಿಟಿಕಿ ಬಾಗಿಲು ಮುರಿದು ಪುಡಿ ಪಡಿ ಮಾಡಿದ್ದಾರೆ.
ಹಸೀನ ಮೃತಪಟ್ಟ ಹಿನ್ನಲೆ ಇಂದು ಗೀತಂ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.