KGF ಸರಣಿ ಮೂಲಕ ಇಡೀ ವಿಶ್ವಕ್ಕೆ ಕನ್ನಡ ಇಂಡಸ್ಟ್ರಿ ಪವರ್ ತೋರಿಸಿಕೊಟ್ಟ ಪ್ಸಿರಶಾಂತ್ನಿ ನೀಲ್ಮಾ ಅವರ ಚೊಚ್ಚಲ ಸಿನಿಮಾ ‘ಉಗ್ರಂ’.. ಈ ಸಿನಿಮಾ ಮೂಲಕ ಮತ್ತೆ ಪವರ್ ಫುಲ್ ಆಗಿ ಕಮ್ ಬ್ಯಾಕ್ ಮಾಡಿದ್ದು ರೋರಿಂಗ್ ಸ್ಟಾರ್ ಶ್ರೀಮುರುಳಿ..
‘ಉಗ್ರಂ’ ಸಿನಿಮಾ ರಿಲೀಸ್ ಗೂ ಮುನ್ನ ಅಷ್ಟಾಗಿ ಸದ್ದು ಮಾಡಲಿಲ್ಲ.. ಅದ್ಯಾವಾಗ ಬಿಗ್ ಸ್ಕ್ರೀನ್ ಗೆ ಅಪ್ಪಳಿಸಿತೋ , ಸಿನಿಮಾ ಸೂಪರ್ ಹಿಟ್ ಆಯ್ತು.. ಇದು ಪ್ರಶಾಂತ್ ನೀಲ್ ಅವರ ನಿರ್ದೇಶನದ ಮೊದಲ ಸಿನಿಮಾವಾಗಿತ್ತು.. 2014 ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.. ಇದೀಗ ಸುಮಾರು 8 ವರ್ಷಗಳೇ ಕಳೆದಿದೆ.. ಆದ್ರೆ ಈಗಲೂ ಈ ಸಿನಿಮಾವನ್ನ ಯಾರೂ ಮರೆತಿಲ್ಲ , ಮರೆಯೋದೂ ಇಲ್ಲ..
ಅಂದ್ಹಾಗೆ ಈ ಸಿನಿಮಾ ಈಗ ಮರಾಠಿಗೆ ರೀಮೇಕ್್ ಆಗ್ತಿದೆ..
ಹೌದು..! ಮರಾಠಿಯಲ್ಲಿ ಉಗ್ರಂ ಸಿನಿಮಾ ರೀಮೇಕ್ ಆಗುತ್ತಿದೆ. ಮರಾಠಿಯಲ್ಲಿ ಈ ಸಿನಿಮಾವನ್ನ ಸುಮಿತ್ ಕಕ್ಕಡ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡದಲ್ಲಿ ತುಂಬಾ ಮುದ್ದಾಗಿ ಮುಗ್ಧಳ ಪಾತ್ರದಲ್ಲಿ ಹರಿಪ್ರಿಯ ನಟಿಸಿದ್ದರು.. ಅವರ ಪಾತ್ರವನ್ನ ಮರಾಠಿಯಲ್ಲಿ ಶಾನ್ವಿ ಶ್ರೀವತ್ಸವ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ನಾಯಕನಾಗಿ ಶರದ್ ಖೇಳ್ಕರ್ ನಟಿಸುತ್ತಿದ್ದಾರೆ ಎನ್ನಲಾಗಿದೆ..








