ರೇಪ್ ಬಿಟ್ಟು ಕಿರುಕುಳ ಕೇಸ್ ದಾಖಲಿಸಿದ್ದಾರೆ ಯಾಕೆ..? : ಉಗ್ರಪ್ಪ
ಮೈಸೂರು : ಗ್ಯಾಂಪ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತ್ಯಾಚಾರ ನಡೆದ್ರೂ ಐಪಿಸಿ ಸೆಕ್ಷನ್ 376ರ ಅಡಿ ಯಾಕೆ ಕೇಸ್ ಯಾಕೆ ಹಾಕಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಗ್ಯಾಂಗ್ ರೇಪ್ ಮಾಡಿರುವುದು ಸ್ಪಷ್ಟವಾಗಿದೆ. ಆದ್ರೆ ರೇಪ್ ಬಿಟ್ಟು ಕಿರುಕುಳ ಕೇಸ್ ದಾಖಲಿಸಿದ್ದಾರೆ. ರಾಜ್ಯದ ಗೃಹಮಂತ್ರಿಗಳು, ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ತಿಂಗಳಲ್ಲಿ ಒಂದು ಶೂಟೌಟ್ ಆಗಿದೆ. ಮೂರು ಮರ್ಡರ್ ಗಳಾಗಿವೆ, ಮೂರು ದರೋಡೆ, 16 ಕಳ್ಳತನಗಳಾಗಿವೆ.
ಸರಸ್ವತಿಪುರಂನಲ್ಲಿ ಇವತ್ತು ಬಾಲಕಿ ಅತ್ಯಾಚಾರ ಕೇಸ್ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಗುಡುಗಿದ್ದಾರೆ.
ಮುಂದುವರೆದು ಅತ್ಯಾಚಾರ ನಡೆದ್ರೂ 376ರ ಅಡಿ ಕೇಸ್ ಯಾಕೆ ಹಾಕಲಿಲ್ಲ ಎಂದು ಪ್ರಶ್ನಿಸಿದ ಉಗ್ರಪ್ಪ, ಹಿಂದೆ ವಿಬ್ ಗಯಾರ್ ಶಾಲೆಯಲ್ಲಿ ಪ್ರಕರಣ ಆಗಿತ್ತು ಆಗ ನೀವು ಏನಂತ ಬಾಯಿ ಬಡಿದುಕೊಳ್ತಿದ್ರಿ. ಈಗ ಮೈಸೂರಿನ ಹೊಣೆ ಯಾರು ಹೊರಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.