ಇನ್ನು ಮುಂದೆ ಆನ್‌ಲೈನ್ ನಲ್ಲಿ ಆಧಾರ್ ಮರುಮುದ್ರಣ ಸಾಧ್ಯವಿಲ್ಲ!
ನೀವು ಆಧಾರ್ ಕಾರ್ಡ್‌ನಲ್ಲಿ ಏನನ್ನಾದರೂ ಬದಲಾವಣೆ ಮಾಡಲು ಬಯಸಿದ್ದರೆ ಈ ಸುದ್ದಿ ನಿಮಗಾಗಿ. ಯುಐಡಿಎಐ ಆಧಾರ್ ಮರುಮುದ್ರಣ ಸೌಲಭ್ಯವನ್ನು ನಿಲ್ಲಿಸಿದೆ. ಇನ್ನು ಮುಂದೆ ನೀವು ಆನ್‌ಲೈನ್ ನಲ್ಲಿ ಆಧಾರ್ ಅನ್ನು ಮರುಮುದ್ರಣ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಯುಐಡಿಎಐ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ.
ಯುಐಡಿಎಐ ಬಳಕೆದಾರರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.
ಗ್ರಾಹಕರ ವಿಚಾರಣೆಗೆ ಸಂಬಂಧಿಸಿದಂತೆ ಆಧಾರ್ ಸಹಾಯ ಕೇಂದ್ರ ಮತ್ತು ಆಧಾರ್ ಮರುಮುದ್ರಣ ಸೇವೆ ಸ್ಥಗಿತಗೊಂಡಿದೆ ಎಂದು ಯುಐಡಿಎಐ ಟ್ವೀಟ್ ಮಾಡಿದೆ. ಭಾವೇಶ್ ಪಟೇಲ್ ಎಂಬ ಬಳಕೆದಾರರು ತಮ್ಮ ಟ್ವೀಟ್‌ನಲ್ಲಿ ಆಧಾರ್ ಅನ್ನು ಟ್ಯಾಗ್ ಮಾಡಿ ವೆಬ್‌ಸೈಟ್‌ನಲ್ಲಿ ಆಧಾರ್ ಮರುಮುದ್ರಣ ಸೇವೆ ಗೋಚರಿಸುವುದಿಲ್ಲ ಎಂದು ಬರೆದಿದ್ದರು. ಇದಕ್ಕೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಯುಐಡಿಎಐ, ಆಧಾರ್ ಮರುಮುದ್ರಣ ಸೇವೆಯ ಆದೇಶವನ್ನು ಸ್ಥಗಿತಗೊಳಿಸುವ ಕೆಲಸವನ್ನು ಮಾಡಲಾಗಿದೆ. ಬದಲಿಗೆ ಆನ್‌ಲೈನ್‌ನಲ್ಲಿ ಆಧಾರ್ ಪಿವಿಸಿ ಕಾರ್ಡ್ ಅನ್ನು ಆರ್ಡರ್ ಮಾಡಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಇ-ಆಧಾರ್ ಅನ್ನು ನೀವು ಕಾಗದದ ರೂಪದಲ್ಲಿ ಇಡಲು ಬಯಸಿದರೆ ಅದನ್ನು ಮುದ್ರಿಸಿಕೊಳ್ಳಬಹುದು ಎಂದು ಹೇಳಿದೆ.
ಪಿವಿಸಿ ಆಧಾರ್ ಕಾರ್ಡ್ ತಯಾರಿಸುವುದು ಹೇಗೆ?
ಇದಕ್ಕಾಗಿ, ನೀವು ಯುಐಡಿಎಐ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಇದರ ನಂತರ, ‘ನನ್ನ ಆಧಾರ್’ ವಿಭಾಗಕ್ಕೆ ಹೋಗಿ ‘ಆರ್ಡರ್ ಆಧಾರ್ ಪಿವಿಸಿ ಕಾರ್ಡ್’ ಕ್ಲಿಕ್ ಮಾಡಿ.
ಇದರ ನಂತರ, ನಿಮ್ಮ 12 ಅಂಕಿಯ ಆಧಾರ್ ದಾಖಲಾತಿ ಐಡಿ (ಇಐಡಿ) ಅಥವಾ 16 ಅಂಕಿಯ ವರ್ಚುವಲ್ ಐಡಿ ಅಥವಾ 28 ಅಂಕಿಯ ಆಧಾರ್ ದಾಖಲಾತಿ ಐಡಿಯನ್ನು ನಮೂದಿಸಬೇಕಾಗುತ್ತದೆ.
-ಈಗ ನೀವು ಭದ್ರತಾ ಕೋಡ್ ಅಥವಾ ಕ್ಯಾಪ್ಚಾವನ್ನು ಕಾಣುತ್ತೀರಿ. ಅದನ್ನು ಭರ್ತಿ ಮಾಡಬೇಕು.
-ಇದನ್ನು ಮಾಡಿದ ನಂತರ, ಒಟಿಪಿ ಆಯ್ಕೆಯನ್ನು ಸಕ್ರಿಯಗೊಳಿಸಲಾಗುತ್ತದೆ.
– ಒಟಿಪಿಯು ನಿಮ್ಮ ನೋಂದಾಯಿತ ಮೊಬೈಲ್ ಅನ್ನು ತಲುಪುತ್ತದೆ. ಅದನ್ನು ಭರ್ತಿ ಮಾಡಿದ ನಂತರ, ನೀವು ಆನ್‌ಲೈನ್ ಫಾರ್ಮ್ ಅನ್ನು ಸಲ್ಲಿಸಬಹುದು.
ಇದನ್ನು ಮಾಡಿದ ನಂತರ, ಪಿವಿಸಿ ಆಧಾರ್ ಕಾರ್ಡ್‌ನ ಪೂರ್ವವೀಕ್ಷಣೆಯನ್ನು ನೀವು ಕಾಣುತ್ತಿರಿ, ಜೊತೆಗೆ ಪಾವತಿಯ ಆಯ್ಕೆಯನ್ನು ಅದರಲ್ಲಿ ಕಾಣಬಹುದು. ಇದರಲ್ಲಿ ನೀವು ಪಾವತಿ ಮೋಡ್ ಅನ್ನು ಕ್ಲಿಕ್ ಮಾಡಬೇಕು.
– ಇದರ ಮೂಲಕ ನೀವು 50 ರೂಪಾಯಿ ಶುಲ್ಕವನ್ನು ಜಮಾ ಮಾಡಬೇಕಾಗುತ್ತದೆ.
ಹಾಗೆ ಮಾಡಿದ ನಂತರ, ನಿಮ್ಮ ಆಧಾರ್ ಪಿವಿಸಿ ಕಾರ್ಡ್ ಆದೇಶ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ನಂತರ, ಯುಐಡಿಎಐ 5 ದಿನಗಳಲ್ಲಿ ಆಧಾರ್ ಅನ್ನು ಮುದ್ರಿಸುತ್ತದೆ ಮತ್ತು ಅಂಚೆ ಇಲಾಖೆ ಅದನ್ನು ನಿಮ್ಮ ಮನೆಗೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸುತ್ತದೆ.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ.
ವಿಟಮಿನ್ ಬಿ 7 ಕೊರತೆಯಿಂದ ಯಾವ ಸಮಸ್ಯೆಗಳು ಸಂಭವಿಸಬಹುದು ?#Saakshatv #healthtips #VitaminB7 https://t.co/bnaep0xwMN
— Saaksha TV (@SaakshaTv) May 27, 2021
ಮದ್ದೂರು ವಡೆ#Saakshatv #cookingrecipe #madduruvade https://t.co/d6x7BrV5CS
— Saaksha TV (@SaakshaTv) May 27, 2021
ಕ್ಯಾಬೇಜ್ ಮಂಚೂರಿ#Saakshatv #cookingrecipe #cabbage #Manchurian https://t.co/RmtQQM4qR2
— Saaksha TV (@SaakshaTv) May 26, 2021
ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?#coronavirus https://t.co/sxFtepvaLF
— Saaksha TV (@SaakshaTv) May 26, 2021
#UIDAI #Aadhaar #reprint