UK | ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ ದಂಪತಿ
ಬರೆದಿಟ್ಟಿದ್ದರೇ ನಮಗೆ ಸಿಗಬೇಕಾದ್ದದ್ದು ಸಿಕ್ಕೇ ಸಿಗುತ್ತೆ ಅನ್ನೋ ಮಾತು ನಿಜವಾಗಿದೆ.
ಹೌದು..! ಯುಕೆಯಲ್ಲಿ ಮನೆಯನ್ನು ನವೀಕರಿಸುತ್ತಿರುವ ವೇಳೆ ದಂಪತಿಗೆ 2 ಕೋಟಿ ಮೌಲ್ಯದ ಚಿನ್ನ ಸಿಕ್ಕಿದ್ದು, ರಾತ್ರೋ ರಾತ್ರಿ ಅವರು ಕೋಟ್ಯಾಧಿಪತಿಗಳಾಗಿದ್ದಾರೆ.
ದಿ ಟೈಮ್ಸ್ ವರದಿಯ ಪ್ರಕಾರ, ನಾರ್ಥ್ ಯಾರ್ಕ್ ಶೈರ್ ನಲ್ಲಿನ ಎಲ್ಲೆರ್ಬಿ ಗ್ರಾಮದಲ್ಲಿ ದಂಪತಿವೊಂದು ತಮ್ಮ ಹಳೆಯ ಮನೆಯನ್ನು ನವೀಕರಿಸಲು ಮುಂದಾಗಿದ್ದರು.
ಅದರಂತೆ ತಮ್ಮ ಮನೆಯಲ್ಲಿನ್ನ ಅಡುಗೆ ಮನೆಯಲ್ಲಿ ಅಗೆಯಲು ಮುಂದಾಗಿದ್ದಾರೆ. ಈ ಹಂತದಲ್ಲಿ ಒಂದು ಸ್ಥಳದಲ್ಲಿ ಅಗೆಯುವಾಗ ಶಬ್ದಬಂದಿದೆ.

ಇದರಿಂದ ಅಚ್ಚರಿಗೊಂಡ ದಂಪತಿ, ಆಳವಾಗಿ ಅಗೆದು ನೋಡಿದ್ದಾರೆ. ಆಗ ಅಲ್ಲಿ ಒಂದು ಕ್ಯಾನ್ ಸಿಕ್ಕಿದೆ.
ಅದನ್ನ ಹೊರಗಡೆ ತೆಗೆದುಕೊಂಡು ಓಪನ್ ಮಾಡಿದಾಗ ಚಿನ್ನದ ನಾಣ್ಯಗಳು ಕಂಡಿವೆ.
ಇದರೊಂದಿಗೆ ಅವರು ಖುಷಿಯಲ್ಲಿ ತೇಲಾಡಿದ್ದಾರೆ.
ಆ ನಾಣ್ಯಗಳ ಮೇಲೆ 1610 – 1727 ರ ಮುದ್ರೆಗಳಿವೆ. ಇವು ಒಂದನೇ ಜೇಮ್ಸ್ ಕಾಲದ ನಾಣ್ಯಗಳಾಗಿವೆ.
ಸುಮಾರು 264 ಚಿನ್ನದ ನಾಣ್ಯಗಳು ಅವರಿಗೆ ಸಿಕ್ಕಿವೆ.
ಪ್ರಸ್ತುತ ಅವುಗಳ ದರ ಮಾರ್ಕೆಟ್ ಪ್ರಕಾರ 2.3 ಕೋಟಿ ರೂಪಾಯಿ ಎಂದು ಅಂದಾಜಿಸಲಾಗುತ್ತಿದೆ.








