ಉಕ್ರೇನ್ ಬಿಕ್ಕಟ್ಟು: ರಷ್ಯಾದ ಮೂಲದ ಕಚ್ಚಾ ತೈಲದ ಖರೀದಿ ನಿಲ್ಲಿಸಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಇಂಧನ ಕಂಪನಿ ವಿವಾ ಇಂದು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸುವುದಾಗಿ ಹೇಳಿದೆ. ಶೆಲ್ ಗ್ರೂಪ್ ಆಫ್ ಕಂಪನಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಾ, ಉಕ್ರೇನ್‌ನಲ್ಲಿ ಸಂಘರ್ಷ ಮುಂದುವರಿದಿರುವಾಗ ರಷ್ಯಾ ಮೂಲದ ಕಚ್ಚಾ ತೈಲದ ಖರೀದಿಯನ್ನು ನಿಲ್ಲಿಸುವ ನಿರ್ಧಾರವನ್ನು ಮಾಡಿದೆ ಎಂದು ಹೇಳಿದೆ.
ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ನಂತರ ಮಾಸ್ಕೋ ಮೇಲೆ ವಿಧಿಸಲಾದ ನಿರ್ಬಂಧಗಳ ನಂತರ ರಷ್ಯಾದಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಮಿತಿಗೊಳಿಸುವ, ಅಥವಾ ನಿರ್ಗಮಿಸುವ ಕಂಪನಿಗಳ ಸಾಲಿಗೆ ವಿವಾ ಸೇರುತ್ತದೆ.
ರಷ್ಯಾವು ವಿಶ್ವದ ಶೇಕಡಾ 10 ಕ್ಕಿಂತ ಹೆಚ್ಚು ಕೊಡುಗೆ ನೀಡುವುದರಿಂದ ತೈಲದ ಪರ್ಯಾಯ ಮೂಲಗಳನ್ನು ಹುಡುಕಲು ತೈಲ ಮಾರುಕಟ್ಟೆಗಳು, ವಿಶೇಷವಾಗಿ ಯುರೋಪ್ ರಾಷ್ಟ್ರಗಳು ಪರದಾಡುತ್ತಿದೆ.