Ukraine : ಉಕ್ರೇನ್ ನಲ್ಲಿ ಸಿಲುಕಿದ ಗದಗ ವಿದ್ಯಾರ್ಥಿ
ಗದಗ : ರಷ್ಯಾ-ಉಕ್ರೇನ್ ಯುಧ್ಧ ನಡೆಯುತ್ತಿದ್ದು , ಸಂಘರ್ಷದಿಂದಾಗಿ ಉಕ್ರೇನ್ ಕಾದ ಕೆಂಡದಂತಾಗಿದೆ..
ಆದ್ರೆ ಅಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಹೇಳಲು ಅಸಾಧ್ಯವಾಗಿದೆ..
ಭಾರತ ಸರ್ಕಾರ ನಮ್ಮ ದೇಶದವರನ್ನ ವಾಪಸ್ ಕರೆಸಿಕೊಳ್ಳುವ ಕಾರ್ಯತಂತ್ರದಲ್ಲಿ ತೊಡಗಿದೆ..
ಉಕ್ರೇನ್ ನಲ್ಲಿ ನಮ್ಮ ಕರ್ನಾಟಕದವರೂ ಸಿಲುಕಿದ್ದಾರೆ..
ಉಕ್ರೇನ್ ದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿರೋ ಗದಗ ಜಿಲ್ಲೆಯ ವಿದ್ಯಾರ್ಥಿ ಮಹಾಗಣಪತಿ ಬಿಳಿಮಗ್ಗದ ಉಕ್ರೇನ್ ನಲ್ಲಿ ಸಿಲುಕಿದ್ದಾನೆ..
ಈತ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಯುವಕನಾಗಿದ್ದಾನೆ…
ಗದಗದಲ್ಲಿ ಮಹಾಗಣಪತಿ ತಂದೆ ಕಾಶೀನಾಥ ಬಿಳಿಮಗ್ಗದ ಮಾನಾಡಿದ್ದು , ನಮ್ಮ ಮಗ ಆರಾಮಾಗಿದ್ದಾನೆ ಅಂತಾ ಹೇಳಿದ್ದಾರೆ..
ರಷ್ಯಾ-ಉಕ್ರೇನ್ ಗಡಿಯಿಂದ ನಮ್ಮ ಮಗ ಸುಮಾರು 400 ಕಿಮೀ ದೂರದಲ್ಲಿದ್ದಾನೆ.
ಅಲ್ಲಿ ಯಾವುದೇ ಭೀತಿ ಇಲ್ಲ, ನನ್ನ ಮಗನೊಂದಿಗೆ ಮಾತನಾಡಿದ್ದೇನೆ.
ಮಾ.1 ನೇ ತಾರೀಕಿಗೆ ವಿಮಾನದ ಟಿಕೆಟ್ ಬುಕ್ ಆಗಿದೆ. ಮಗನ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.