Ukraine – Russia ದಾಳಿಯಲ್ಲಿ ಉಕ್ರೇನ್ ನ ಮಕ್ಕಳೂ ಸೇರಿದಂತೆ ಕನಿಷ್ಠ 198 ಪ್ರಜೆಗಳ ಹತ್ಯೆ
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದ್ದು , ಉಕ್ರೇನ್ ಪರಿಸ್ಥಿತಿ ಅತ್ಯಂತ ಭೀಭತ್ಸವಾಗಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿರುವ ಸಂದರ್ಭದಲ್ಲಿ ಅಮೆರಿಕಾ ಸರ್ಕಾರವು ಸೇರಿದಂತೆ ಪಾಶ್ಚಿಮಾತ್ಯ ದೇಶಗಳು , ರಷ್ಯಾ ಅಧಧ್ಯಕ್ಷ ವ್ಲಾಡಿಮಾರ್ ಪುಟಿನ್ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಕನಿಷ್ಠ 198 ಪ್ರಜೆಗಳು ಹತ್ಯೆಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ವಾಹಿತಿ ವರದಿ ಮಾಡಿದೆ.
ಮೃತಪಟ್ಟ ಉಕ್ರೇನ್ ಪ್ರಜೆಗಳಲ್ಲಿ ಯೋಧರು, ನಾಗರಿಕರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಉಕ್ರೇನ್ ಆರೋಗ್ಯ ಸಚಿವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.
ಈ ದಾಳಿಯಲ್ಲಿ 33 ಮಕ್ಕಳು ಸೇರಿದಂತೆ 1,115 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಸಸಿಕ್ಕಿದೆ.
ಉಕ್ರೇನ್‌ನ ನಾಗರಿಕ ಸ್ವಯಂಸೇವಕರು ರಷ್ಯಾದ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ರಷ್ಯಾದ ಟ್ಯಾಂಕ್ ಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.








