Ukraine : ಉಕ್ರೇನ್ ಗೆ ಹೆಚ್ಚುವರಿ ಮಿಲಿಟರಿ ಉಪಕರಣಗಳ ಪೂರೈಕೆ ಮಾಡುವುದಾಗಿ ಕೆನಾಡ ಪ್ರಧಾನಿ ಭರವಸೆ
ರಷ್ಯಾ ದಾಳಿಯಿಂದ ತತ್ತರಿಸಿಹೋಗಿರುವ ಉಕ್ರೇನ್ ಗೆ ಅಮೇರಿಕಾ ಸೇರಿದಂತೆ ಹಲವು ಪಾಶ್ಚಮಾತ್ಯ ದೇಶಗಳು ಪರೋಕ್ಷವಾಗಿ ಬೆಂಬಲಿಸುತ್ತಿವೆ.. ರಷ್ಯಾ ಅಧ್ಯಕ್ಷ ಪುಟಿನ್ ನಡೆ ಖಂಡಿಸಿ ರಷ್ಯಾ ವಿರುದ್ಧ ಪರೋಕ್ಷ ದಾಳಿ ಮಾಡಿವೆ.. ವಾಣಿಜ್ಯವಾಗಿ ಕಟ್ಟಿಹಾಕಿವೆ.. ಮತ್ತೊಂದೆಡೆ ಉಕ್ರೇನ್ ಗೆ ಉಕ್ರೇನ್ ಸಲಕರಣೆಗಳನ್ನೂ ಪೂರೈಕೆ ಮಾಡಲಾಗ್ತಿದೆ..
ಈ ನಡುವೆ ಉಕ್ರೇನ್ ಗೆ ಹೆಚ್ಚುವರಿ ಮಿಲಿಟರಿ ಉಪಕರಣಗಳನ್ನು ಕಳುಹಿಸಲಾಗುವುದು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಿಳಿಸಿದ್ದಾರೆ. ಅಲ್ಲದೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿಯೊಂದಿಗೆ ಮಾತನಾಡಿದ್ದು , ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಹೆಚ್ಚುವರಿಯಾಗಿ ಯುದ್ಧ ಸಲಕರಣೆಗಳನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.