Ukraine : ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಸೋನಿ ಪ್ಲೇಸ್ಟೇಷನ್
ಉಕ್ರೇನ್ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಾರ್ ಪುಟಿನ್ ಯುದ್ಧ ಘೋಷಿಸಿರುವುದು , ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿ ಅನೇಕ ದೇಶಗಳು ರಷ್ಯಾಗೆ ಬಾಹ್ಯವಾಗಿ , ವಾಣಿಜ್ಯವಾಗಿ ಪೆಟ್ಟು ನೀಡುತ್ತಿವೆ.. ಅಮೆರಿಕಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ದೇಶಗಳು ುಕ್ರೇನ್ ಗೆ ಪರೋಕ್ಷವಾಗಿ ಬೆಂಬಲಿಸುತ್ತಾ ರಷ್ಯಾ ವಿರುದ್ಧ ಮುಗಿಬಿದ್ದಿವೆ..
https://twitter.com/FedorovMykhailo/status/1498945221337534469?ref_src=twsrc%5Etfw%7Ctwcamp%5Etweetembed%7Ctwterm%5E1498945221337534469%7Ctwgr%5E%7Ctwcon%5Es1_&ref_url=https%3A%2F%2Fwww.theregister.com%2F2022%2F03%2F10%2Fplaystation_quits_russia%2F
ಇದೀಗ ಗೇಮಿಂಗ್ ಸೋನಿ ಪ್ಲೇಸ್ಟೇಷನ್ ಕಂಪನಿ ರಷ್ಯಾಕ್ಕೆ ಸಾಗಣೆ ಮತ್ತು ಆನ್‌ಲೈನ್ ಸ್ಟೋರ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಸೋನಿ ಇಂಟರಾಕ್ಟೀವ್ ಎಂಟರ್‌ಟೈನ್‌ಮೆಂಟ್, ಪ್ಲೇಸ್ಟೇಷನ್ ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. ನಾವು ಎಲ್ಲಾ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸಾಗಣೆಗಳು, ಗ್ರ್ಯಾನ್ ಟುರಿಸ್ಮೊ 7 ರ ಬಿಡುಗಡೆ ಮತ್ತು ಪ್ಲೇಸ್ಟೇಷನ್ ಸ್ಟೋರ್‌ನ ಕಾರ್ಯಾಚರಣೆಗಳನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಿದ್ದೇವೆ.
https://twitter.com/PlayStation/status/1501689329730478081?ref_src=twsrc%5Etfw%7Ctwcamp%5Etweetembed%7Ctwterm%5E1501689329730478081%7Ctwgr%5E%7Ctwcon%5Es1_&ref_url=https%3A%2F%2Fwww.theregister.com%2F2022%2F03%2F10%2Fplaystation_quits_russia%2F
ಮಾನವೀಯ ನೆರವನ್ನು ಬೆಂಬಲಿಸುವ ಅಂಗವಾಗಿ ಸೋನಿ ಗ್ರೂಪ್ ಕಾರ್ಪೊರೇಷನ್ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಮತ್ತು ಅಂತರರಾಷ್ಟ್ರೀಯ ಎನ್‌ಜಿಒಗೆ ಸೇವ್ ದಿ ಚಿಲ್ಡ್ರನ್‌ಗೆ ಉಕ್ರೇನ್ ದುರಂತದಲ್ಲಿನ ಸಂತ್ರಸ್ತರಿಗೆ ಬೆಂಬಲ ನೀಡಲು 2 ಮಿಲಿಯನ್ ಡಾಲರ್ ದೇಣಿಗೆ ನೀಡಲಿದೆ ಎಂದು ತಿಳಿಸಿದೆ.








