Ukraine Live Updates : ದೇಶ ಬಿಟ್ಟು ಓಡಿ ಹೋಗಲ್ಲ , ಕೊನೆಯ ವರೆಗೂ ದೇಶಕ್ಕಾಗಿ ಹೋರಾಡ್ತೀನಿ : ಉಕ್ರೇನ್ ಅಧ್ಯಕ್ಷ
ಉಕ್ರೇನ್ ಮೇಲೆ ರಷ್ಯಾ ದಾಳಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು , ಉಕ್ರೇನ್ ಸ್ಥಿತಿ ಅತ್ಯಂತ ಭೀಭತ್ಸವಾಗಿದೆ. ಅಮೆರಿಕಾವು ಉಕ್ರೇನ್ ಅಧ್ಯಕ್ಷರಾದ ವೊಲೊಡಿಮಿರ್ ಝೆಲೆನ್ಸ್ಕಿ ಗೆ ದೇಶ ತಿರೆದು ಅಮೇರಿಕಾ ಬರುವಂತೆ ಆಫರ್ ನೀಡಿದ್ದು , ಉಕ್ರೇನ್ ಅಧ್ಯಕ್ಷರು ಈ ಅವಕಾಶವನ್ನ ನಿರಾಕರಿಸಿದ್ದಾರೆ..
ಅಲ್ಲದೇ ನನಗೆ ಸ್ಥಳಾಂತರ ಬೇಡ. ಇಲ್ಲೇ ಇದ್ದು ಹೋರಾಟ ಮಾಡುತ್ತೇನೆ ಎಂದು ಹೇಳುವ ಮೂಲಕ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಜನರನ್ನ ಬಿಟ್ಟು ಓಡಿ ಹೋಗುವುದಿಲ್ಲ ಎಂದು ಹೇಳಿದ್ದಾರೆ..
ಕೀವ್ ತೊರೆಯುವಂತೆ ಅಮೆರಿಕವು ಝೆಲೆನ್ಸ್ಕಿಗೆ ಸಲಹೆ ನಿಡಿತ್ತು. ಆದರೆ ಅಮೆರಿಕಾದ ಸಲಹೆಯನ್ನು ಉಕ್ರೇನ್ ಅಧ್ಯಕ್ಷರು ನಿರಾಕರಿಸಿದ್ದಾರೆ. ಅಲ್ಲದೇ ನಾನು ನನ್ನ ದೇಶದಲ್ಲಿಯೇ ಇರುತ್ತೇನೆ. ನನಗೆ ಯಾವುದೇ ಜೀವ ಭಯವಿಲ್ಲ. ಹೀಗಾಗಿ ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು. ರಷ್ಯಾ ಸೇನೆ ವಿರುದ್ಧ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.