Ukraine : ಉಕ್ರೇನ್ ನಲ್ಲಿ ಸಿಲುಕಿದ ಹಾವೇರಿಯ ಯುವಕ
ಹಾವೇರಿ : ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಹಿನ್ನೆಲೆ, ಅಲ್ಲಿ ಸಿಲುಕಿರುವ ಹಾವೇರಿ ಮೂಲದ ತಮ್ಮ ಮಗನನ್ನ ಸುರಕ್ಷಿತವಾಗಿ ಮನೆಗೆ ಕರೆತರುವಂತೆ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಪೋಷಕರು ಮನವಿ ಮಾಡಿಕೊಂಡಿದ್ದಾರೆ.. ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಪ್ರವೀಣ ಅಜರೆಡ್ಡಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.
ಮೂರು ತಿಂಗಳು ಹತ್ತು ದಿನಗಳ ಹಿಂದಷ್ಟೆ ಉಕ್ರೇನ್ ಗೆ ಹೋಗಿರೋ ಪ್ರವೀಣ ಎಂಬಿಬಿಎಸ್ ಅಭ್ಯಾಸ ಮಾಡಲು ಕಾರ್ಕ್ಯೂ ಇಂಟರ್ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿಗೆ ಹೋಗಿದ್ದ. ಪೋಷಕರು ಮಗನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರವೀಣ ವಾಸವಾಗಿರೋ ನಲ್ವತ್ತು ಕಿ.ಮೀ ದೂರದಲ್ಲಿ ಗಡಿ ಪ್ರದೇಶ ಇರೋದ್ರಿಂದ ಪ್ರವೀಣ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ತಮ್ಮ ಮಗನೂ ಸೇರಿದಂತೆ ಉಕ್ರೇನ್ ನಲ್ಲಿರೋ ಭಾರತೀಯರನ್ನ ಸುರಕ್ಷಿತವಾಗಿ ಕರೆತರುವಂತೆ ಪ್ರವೀಣ ಪೋಷಕರು ಮನವಿ ಮಾಡಿದ್ದಾರೆ..








