ಚಾಮರಾಜನಗರ : ಉಕ್ರೇನ್ ಪರಿಸ್ಥಿತಿ ದಿನಕಳೆದಂತೆ ಹದಗೆಡುತ್ತಿದೆ.
ಮತ್ತೊಂದೆಡೆ ನಮ್ಮ ಭಾರತೀಯರು ಅದ್ರಲ್ಲೂ ನಮ್ಮ ಕರ್ನಾಟಕದವರು ಉಕ್ರೇನ್ ನಲ್ಲಿ ಸಿಲುಕಿ ಒದ್ದಾಡ್ತಿದ್ದಾರೆ..
ಅನೇಕರು ಸೆಲ್ಫಿ ವಿಡಿಯೋಗಳನ್ನ ಮಾಡಿ ಅಲ್ಲಿನ ಸಮಸ್ಯೆಗಳನ್ನ ವಿವರಿಸುತ್ತಾ , ತಮ್ಮ ಪರಿಸ್ಥಿತಿ ಬಗ್ಗೆ ಹೇಳಿಕೊಳ್ತಿದ್ದಾರೆ.
ಚಾಮರಾಜನಗರದ ವೈದ್ಯಕೀಯ ವಿದ್ಯಾರ್ಥಿನಿ ಕಾವ್ಯ ಸಹ ವಿಡಿಯೋ ಮಾಡಿದ್ದು ,
ನಮ್ಮನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.
ಕಳೆದೆರಡು ದಿನದಿಂದ ಮೇಟ್ರೋ ಸ್ಟೇಷನ್ ನಲ್ಲಿದ್ದೇವೆ. ಇಲ್ಲಿ ಬಾಂಬ್ ಪ್ರೊಟೆಕ್ಟರ್ ಇದೆ.
ಇದು ಸುರಕ್ಷಿತ ಎಂದು ಇಲ್ಲೇ ಇದ್ದೇವೆ ಎಂದಿದ್ದಾರೆ.
ಇನ್ನೂ ನಮಗೆ ನೀರು ಸಿಕ್ತಿಲ್ಲ. ಯುದ್ದ ಘೋಷಣೆ ಮುನ್ನವೇ ಮಾಹಿತಿ ಕೊಟ್ಟಿದ್ರು.
ದಿನಸಿ ಸಾಮಾನುಗಳನ್ನು ಶೇಖರಿಸಿಕೊಳ್ಳಿ ಎಂದು ಉಕ್ರೇನ್ ಆಡಳಿತ ತಿಳಿಸಿದ್ರು.
ಸದ್ಯ ಎಲ್ಲವನ್ನೂ ಶೇಖರಣೆ ಮಾಡಿದ್ದೇವೆ.
ರಷ್ಯಾದವರು ಉಕ್ರೇನ್ ಏರ್ ಸ್ಪೇಸ್ಗಳನ್ನು ವಶಕ್ಕೆ ಪಡೆದಿದ್ದಾರೆ
ವಿಮಾನ ನಿಲ್ದಾಣಗಳೆಲ್ಲವೂ ರಷ್ಯಾದವರ ಹಿಡಿತದಲ್ಲಿವೆ.
ಭಾರತ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.










