ತುಮಕೂರು : ರಷ್ಯಾ – ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಚಿತ್ರಣಗಳು ಸಿಕ್ಕಿದೆ.
ಅಲ್ಲಿ ಪರಿಸ್ಥಿತಿ ಭೀಭತ್ಸವಾಗಿದೆ.. ಭಾರತದವರು ಅದ್ರಲ್ಲೂ ಕರ್ನಾಟಕದವರು ಉಕ್ರೇನ್ ನಲ್ಲಿ ಸಿಲುಕಿ ಒದ್ದಾಡ್ತಿದ್ದಾರೆ..
ಇನ್ನೂ ಉಕ್ರೇನ್ ನಲ್ಲಿ ತುಮಕೂರಿನ ಪಾವಗಡದ ವಿದ್ಯಾರ್ಥಿಯೂ ಸಿಲುಕಿಕೊಂಡಿದ್ದಾರೆ.
ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವೇಣು ಸಿಲುಕಿದ್ದು ಈ ಬಗ್ಗೆ ವಿಡಿಯೋ ಮಾಡಿ ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಮಾತನಾಡಿದ್ದಾರೆ..
ಇಲ್ಲಿ ಎಲ್ಲೆಡೆ ಬಾಂಬ್ ಬ್ಲಾಸ್ಟ್ ಆಗ್ತಿದೆ,ಆದ್ರೆ ನಾವು ಸುರಕ್ಷಿತವಾಗಿದ್ದೇವೆ.. ಎಲ್ಲರೂ ಹಾಸ್ಟೆಲ್ ನಲ್ಲಿ ಸುರಕ್ಷಿತವಾಗಿದ್ದೇವೆ..
ಇಂಡಿಯನ್ ಎಂಬೆಸ್ಸಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ..
ಆದಷ್ಟು ಬೇಗ ಇಂಡಿಯನ್ ಎಂಬೆಸ್ಸಿಯಿಂದ ನಮಗೆ ವಿಮಾನ ವ್ಯವಸ್ಥೆಯಾಗಲಿದೆ..
ನಮ್ಮ ಪೋಷಕರು ಯಾರು ಆತಂಕಪಡುವ ಅಗತ್ಯ ಇಲ್ಲಾ ಎಂದಿದ್ದಾರೆ.








