Ukraine : ಉಕ್ರೇನ್ ನಲ್ಲಿ ಸಿಲುಕಿರುವ ವಿಜಯಪುರದ ಆದರ್ಶನಗರದ ವಿದ್ಯಾರ್ಥಿ ಅಮನ್ ಮಮದಾಪುರ
ವಿಜಯಪುರ : ರಷ್ಯಾ – ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಚಿತ್ರಣಗಳು ಸಿಕ್ಕಿದೆ… ಅಲ್ಲಿಮ ಪರಿಸ್ಥಿತಿ ಭೀಭತ್ಸವಾಗಿದೆ.. ಭಾರತದವರು ಅದ್ರಲ್ಲೂ ಕರ್ನಾಟಕದವರು ಉಕ್ರೇನ್ ನಲ್ಲಿ ಸಿಲುಕಿ ಒದ್ದಾಡ್ತಿದ್ದಾರೆ..
ವಿಜಯಪುರದ ಆದರ್ಶನಗರದ ವಿದ್ಯಾರ್ಥಿ ಅಮನ್ ಮಮದಾಪುರ ಕೂಡ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಮಮದಾಪುರ ತವರಿಗೆ ಬರಲು ನಿನ್ನೆ ಉಕ್ರೇನ್ ಏರಪೋರ್ಟ್ ಗೆ ಬಂದಿದ್ದರು… ಅವರ ಜೊತೆಗೆ ಹಲವು ವಿದ್ಯಾರ್ಥಿಗಳು ಬಂದಿದ್ದರು.
ಆದ್ರೆ ಫ್ಲೈಟ್ ರದ್ದಾದ ಹಿನ್ನೆಲೆ ವಾಪಸ್ ಬರಲು ಪರದಾಡುತ್ತಿದ್ದಾರೆ.. ಇತ್ತ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರು ಆತಂಕದಲ್ಲಿದ್ದಾರೆ..








