Ukraine : ಉಕ್ರೇನ್ ನೆರವಿಗೆ ಧಾವಿಸಿದ ಗ್ರೀಸ್
ರಷ್ಯಾ ದಾಳಿಯಿಂದ ನಲುಗಿ ಹೋಗಿರುವ ಉಕ್ರೇನ್ ಸಹಾಯಕ್ಕೆ ಗ್ರೀಸ್ ಧಾವಿಸಿದ್ದು , ರಕ್ಷಣಾ ನೆರವು ನೀಡಲು ಮುಂದಾಗಿದೆ.
ರಕ್ಷಣಾ ಸಾಮಗ್ರಿಗಳನ್ನು ಕಳುಹಿಸಿಕೊಡಲು ಉಕ್ರೇನ್ ಸರ್ಕಾರವು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ರಕ್ಷಣಾ ಸಾಮಗ್ರಿ ನೆರವನ್ನು ನೀಡಲಾಗುತ್ತಿದೆ ಎಂದು ಗೀಸ್ ಪ್ರಧಾನಿ ಕಚೇರಿ ತಿಳಿಸಿದೆ.
ಎರಡು C-130 ಮಿಲಿಟರಿ ವಿಮಾನಗಳು ಸೇರಿದಂತೆ ಹಲವು ಯುದ್ದ ಸಾಮಾಗ್ರಿಗಳನ್ನು ಪೋಲೆಂಡ್ ಮೂಲಕ ಉಕ್ರೇನ್‌ಗೆ ಸಾಗಿಸಲಾಗುತ್ತದೆ. ಅಷ್ಟೇ ಅಲ್ದೇ ಉಕ್ರೇನ್‌ಗೆ ಬೆಂಬಲ ಸೂಚಿಸಲು ರಷ್ಯಾ ಮೂಲದ ಹೂಡಿಕೆದಾರರಿಗೆ ಗ್ರೀಸ್ ದೇಶವು ನಿರ್ಬಂಧ ಹೇರಿದೆ.








