Ukraine : ವಸತಿ ಪ್ರದೇಶಗಳ ಮೇಲೆ ರಷ್ಯಾ ಶೆಲ್ ದಾಳಿ – ಉಕ್ರೇನ್
ಉಕ್ರೇನ್ : ಯುದ್ಧಪೀಡಿತ ಉಕ್ರೇನ್ ನಲ್ಲಿ ರಷ್ಯಾ 4 ನಗರಗಳಲ್ಲಿ ಕದಮ ವಿರಾಮ ಘೋಷಿಸಿದ ಹೊರತಾಗಿಯೂ ಬೇರೆಡೆಗಳಲ್ಲಿ ದಾಳಿ ಮುಂದುವರೆಸಿದೆ..
ಇತ್ತ ಉಕ್ರೇನ್ ನ ಮಧ್ಯಭಾಗ, ಉತ್ತರ ಮತ್ತು ದಕ್ಷಿಣದಲ್ಲಿರುವ ನಗರಗಳ ಮೇಲೆ ಶೆಲ್ ದಾಳಿಯನ್ನು ತೀವ್ರಗೊಳಿಸಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಶೆಲ್ ದಾಳಿಯಿಂದಾಗಿ ಮುತ್ತಿಗೆ ಹಾಕಿರುವ ನಗರಗಳಲ್ಲಿ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದೂ ಕೂಡ ಹೇಳಿಕೊಂಡಿದ್ದಾರೆ.
ಉಕ್ರೇನ್‌ನ ಉತ್ತರದಲ್ಲಿ ಕೀವ್, ಚೆರ್ನಿಹಿವ್, ದಕ್ಷಿಣದಲ್ಲಿ ಮೈಕೊಲೈವ್ ಮತ್ತು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ ನ ಹೊರವಲಯಗಳಲ್ಲಿ ರಷ್ಯಾ ಶೆಲ್ ದಾಳಿಯನ್ನು ಮುಂದುವರೆಸಿದೆ ಎಂದು ತಿಳಿಸಿದ್ದಾರೆ.








