Ukraine : ರಷ್ಯಾ – ಉಕ್ರೇನ್ ಗೆ ಶಾಂತಿ ಪಾಠ ಮಾಡಿದ ತಾಲಿಬಾನ್
ರಷ್ಯಾ – ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು , ಉಕ್ರೇನ್ ಕಾದ ಕೆಂಡದಂತಾಗಿದೆ.. ಆದ್ರೆ ಇತ್ತೀಚೆಗೆಷ್ಟೇ ಅಫ್ಗಾನ್ ನಲ್ಲಿ ಸಾವಿರಾರು ಜನರ ಜೀವನ ನರಕ ಮಾಡಿ , ಅದೆಷ್ಟೋ ಜನರ ಪ್ರಾಣ ತೆಗೆದ ನರ ರೂಪಿ ರಾಕ್ಷಸರು ತಾಲಿಬಾನಿಗಳು ಇದೀಗ ಉಕ್ರೇನ್ – ರಷ್ಯಾಗೆ ಶಾಂತಿ ಪಾಠ ಮಾಡಿ ವಿಶ್ವದ ಮುಂದೆ ನಗೆಪಾಟಲಿಗೀಡಾಗಿದ್ದಾರೆ.
2021ರ ಆಗಸ್ಟ್‌ನಲ್ಲಿ ಹಿಂಸಾಚಾರದ ಮೂಲಕವೇ ಅಫ್ಗಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಇದೀಗ ರಷ್ಯಾ ಮತ್ತು ಉಕ್ರೇನ್‌ಗೆ ಶಾಂತಿ ಪಾಠ ಮಾಡಿದೆ.. ಶಾಂತಿಯುತ ಮಾತುಕತೆ ಮೂಲಕ ಬಿಕ್ಕಟ್ಟನ್ನು ಶಮನಗೊಳಿಸುವಂತೆ ಸಲಹೆ ನೀಡಿದೆ.
ನಾಗರಿಕರ ಸಾವುನೋವಿನ ಸಾಧ್ಯತೆಯ ಕುರಿತು ಕಳವಳ ವ್ಯಕ್ತಪಡಿಸಿರುವ ತಾಲಿಬಾನ್, ಹಿಂಸಾಚಾರದಿಂದ ದೂರ ಇರುವಂತೆ ಎರಡೂ ದೇಶಗಳನ್ನು ಒತ್ತಾಯಿಸಿದೆ. ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಗಾನಿಸ್ತಾನವು ಉಕ್ರೇನ್‌ನಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಾಗರಿಕರ ಸಾವು ನೋವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಎರಡೂ ದೇಶದವರು ಸಂಯಮ ತೋರಬೇಕು ಎಂದು ಕರೆ ನೀಡಿದ್ದಾರೆ.









