Ukraine : ಉಕ್ರೇನ್ ನಲ್ಲಿ ಸಿಲುಕಿರುವ ವಿಜಯಪುರದ ವಿದ್ಯಾರ್ಥಿ
ವಿಜಯಪುರ : ರಷ್ಯಾ-ಉಕ್ರೇನ್ ಯುಧ್ಧ ನಡೆಯುತ್ತಿದ್ದು , ಸಂಘರ್ಷದಿಂದಾಗಿ ಉಕ್ರೇನ್ ಕಾದ ಕೆಂಡದಂತಾಗಿದೆ..
ಆದ್ರೆ ಅಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಹೇಳಲು ಅಸಾಧ್ಯವಾಗಿದೆ..
ಭಾರತ ಸರ್ಕಾರ ನಮ್ಮ ದೇಶದವರನ್ನ ವಾಪಸ್ ಕರೆಸಿಕೊಳ್ಳುವ ಕಾರ್ಯತಂತ್ರದಲ್ಲಿ ತೊಡಗಿದೆ..
ಉಕ್ರೇನ್ ನಲ್ಲಿ ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿ ಸಿಲುಕಿದ್ದಾಳೆ.
ಎಂಬಿಬಿಎಸ್ ವ್ಯಾಸಾಂಗ ಮಾಡಲು ಕಳೆದ ಒಂದೂವರೆ ವರ್ಷದ ಹಿಂದೆ ಉಕ್ರೇನ್ ನಲ್ಲಿ ವಾಸವಾಗಿದ್ದಾಲೆ..
ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಉಕ್ರೇನ್ ನಲ್ಲಿರೋ ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿಯಾಗಿದ್ದಾರೆ.
ಇವರು ಮೂಲತಃ ತಮದಡ್ಡಿ ಗ್ರಾಮದವರು.
ಸುಚಿತ್ರಾ ಪೋಷಕರು ವಿಜಯಪುರ ನಗರದಲ್ಲಿ ವಾಸವಿದ್ದಾರೆ. ಸುಚಿತ್ರಾ ತಂದೆ ಮಲ್ಲನಗೌಡ ಕವಡಿಮಟ್ಟಿ ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.
ಡಿಸಿಸಿ ಬ್ಯಾಂಕ್ ನಲ್ಲಿ ಫೀಲ್ಡ್ ಆಫೀಸರ್ ಆಗಿದ್ದಾರೆ.
ತಾಯಿ ಕಮಲಾ ಕವಡಿಮಟ್ಟಿ ಗೃಹಿಣಿಯಾಗಿದ್ದಾರೆ.
ಉಕ್ರೇನ್ ರಷ್ಯಾ ಮದ್ಯೆ ನಡೆಯುತ್ತಿರೋ ಯುದ್ಧವಿರೊದ್ರಿಂದ ಸುಚಿತ್ರಾ ಮನೆಯವರಲ್ಲಿ ಆತಂಕ ಮನೆ ಮಾಡಿದೆ.








