ukraine vs russia war | ದಾಳಿ ತೀವ್ರಗೊಳಿಸಿದ ರಷ್ಯಾ | ಎರಡು ದೊಡ್ಡನಗರಗಳಿಗೆ ಮುತ್ತಿಗೆ
ಕೀವ್ : ರಷ್ಯಾ ಪಡೆಗಳು ಉಕ್ರೇನ್ ಮೇಲಿನ ದಾಳಿಯನ್ನ ತೀವ್ರಗೊಳಿಸಿವೆ.
ರಷ್ಯಾ ಪಡೆಗಳ ದಾಳಿಗೆ ಸಿಲುಕಿರುವ ಉಕ್ರೇನ್ ತತ್ತರಿಸಿ ಹೋಗಿದ್ದು, ಇದೀಗ ರಷ್ಯಾದ ಪಡೆಗಳು ಖಾರ್ಕಿವ್ ನಗರವನ್ನು ಪ್ರವೇಶಿಸಿವೆ ಎಂದು ವರದಿಯಾಗಿದೆ.
ಜೊತೆಗೆ ರಷ್ಯಾ ಸೈನಿಕರು ಉಕ್ರೇನ್ ನ ದಕ್ಷಿಣ ಮತ್ತು ಆಗ್ನೇಯ ಭಾಗದ ಎರಡು ದೊಡ್ಡ ನಗರಗಳಿಗೆ ಮುತ್ತಿಗೆ ಹಾಕಿದ್ದಾರೆ ಎಂದು ರಷ್ಯಾ ಹೇಳಿಕೊಂಡಿದೆ.
ಬಗ್ಗೆ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.
ಈ ಕುರಿತಂತೆ ರಷ್ಯಾ ರಕ್ಷಣಾ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, ರಷ್ಯಾದ ಪಡೆಗಳು ದಕ್ಷಿಣ ಉಕ್ರೇನ್ ನಗರಗಳಾದ ಖೇರ್ಸನ್ ಮತ್ತು ಬೆರ್ಡಿಯನ್ಸ್ಕ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.
ಈ ಎರಡೂ ನಗರಗಳ ವಿಮಾನ ನಿಲ್ದಾಣವನ್ನು ಸ್ವಾಧೀನಪಡಿಸಿಕೊಂಡಿವೆ ಎಂದು ಉಲ್ಲೇಖಿಸಿ ಆರ್ ಐಎ ಸುದ್ದಿ ಸಂಸ್ಥೆ ಹೇಳಿದೆ. ukraine-vs-russia-war-Russia Enters Kharkiv Saaksha Tv









