Ukraine : ಪುಟಿನ್ ವಿರುದ್ಧ ಮೈತ್ರಿಕೂಟಕ್ಕೆ ವಿಶ್ವ ನಾಯಕರನ್ನು ಆಹ್ವಾನಿಸಿದ ಬೋರಿಸ್
ಉಕ್ರೇನ್ ಮೇಲೆ ಮುಗಿ ಬಿದ್ದು ದಾಳಿ ಮಾಡುತ್ತಿರುವ ರಷ್ಯಾ ವಿರುದ್ಧ ಹೋರಾಡಲು , ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೈತ್ರಿಕೂಟವನ್ನು ರಚಿಸಲು , ವಿಶ್ವನಬಾಯಕರನ್ನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಹ್ವಾನಿಸಿದ್ದಾರೆ…
ಜೊತೆಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರನ್ನು ಸಹ ಆಹ್ವಾನಿಸಿದ್ದಾರೆ. ಉಕ್ರೇನ್ ನ ನಗರಗಳ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ ದಾಳಿಯನ್ನು ಎದುರಿಸಲು ಮುಂದಿನ ಕ್ರಮಗಳನ್ನು ಬಗ್ಗೆ ಚರ್ಚಿಸುವ ಸಲುವಾಗಿ ಮೂವರು ಪ್ರಧಾನಿಗಳು ಪ್ರತ್ಯೇಕ ದ್ವಿಪಕ್ಷೀಯ ಸಭೆಗಳು ಮತ್ತು ಜಂಟಿ ತ್ರಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ.








