Ukraine : ಗುಂಡೇಟಿನಿಂದ ಗಾಯಗೊಂಡಿದ್ದ ಭಾರತದ ವಿದ್ಯಾರ್ಥಿ ಸ್ವದೇಶಕ್ಕೆ ವಾಪಸ್.. Video
ರಷ್ಯಾ ದಾಳಿಯಿಂದ ಕಾದಕೆಂಡದಂತಾಗಿರುವ ಉಕ್ರೇನ್ ನಲ್ಲಿ ಬಾರತೀಯ ವಿದ್ಯಾರ್ಥಿಗಳ ಪರಿಸ್ಥಿತಿಯೂ ಹೇಳತೀರದ್ದಾಗಿದೆ.. ಅಲ್ಲಿ ಪರದಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಕರೆತರಲು ಕೇಂದ್ರವೂ ಎಲ್ಲಾ ಸಾಧ್ಯ ಪ್ರಯತ್ನ ಮಾಡುತ್ತಿದೆ.. ಈ ನಡುವೆ ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ವಿದ್ಯಾರ್ಥಿಯನ್ನು ಪೋಲೆಂಡ್ ದೇಶದಲ್ಲಿ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು ಭೇಟಿಯಾಗಿದ್ದಾರೆ. ಅಲ್ಲದೇ ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ವಿದ್ಯಾರ್ಥಿಯನ್ನು ಭಾರತಕ್ಕೆ ವಾಪಸ್ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ವಿದ್ಯಾರ್ಥಿ ಹರ್ಜೋತ್ ಸಿಂಗ್ ಪ್ರಯಾಣಿಸುವ ವಿಮಾನ ರಾತ್ರಿ 7 ಗಂಟೆಗೆ ದೆಹಲಿ ತಲುಪಲಿದೆ. ಆತನೊಂದಿಗೆ 200 ಮಂದಿ ಭಾರತೀಯರು ಪೋಲೆಂಡ್ ನಿಂದ ಪ್ರಯಾಣ ಬೆಳೆಸಲಿದ್ದಾರೆ. ಸದ್ಯ ವಿದ್ಯಾರ್ಥಿ ಉಕ್ರೇನ್ ನಿಂದ ಪೋಲೆಂಡ್‌ಗೆ ತಲುಪಿದ್ದಾರೆ.
https://twitter.com/i/status/1500697658868236288








