Ukraine : ತಮಗೆ ಯುದ್ಧ ವಿಮಾನಗಳನ್ನು ಪೂರೈಸಿ : ಉಕ್ರೇನ್ ಅಧ್ಯಕ್ಷ ಝೆಲೆನ್ಕ್ಸಿ
ರಷ್ಯಾ ದಾಳಿಯನ್ನ ಏಕಾಂಗಿಯಾಗಿ ಧೈರ್ಯವಾಗಿ ಎದುರಿಸುತ್ತಾ , ಹೋರಾಡುತ್ತಿರುವ ಉಕ್ರೇನ್ ಪರ ಅನೇಕ ದೇಶಗಳು ಬಾಹ್ಯ ಬೆಂಬಲ ಸೂಚಿಸುತ್ತಿವೆ..
ಈ ನಡುವೆ ರಷ್ಯಾದ ವಿರುದ್ಧದ ದಾಳಿಯನ್ನು ಎದುರಿಸಲು ತಮಗೆ ಯುದ್ಧ ವಿಮಾನಗಳನ್ನು ಪೂರೈಸಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ ರಷ್ಯಾದ ತೈಲ, ತೈಲದ ಉತ್ಪನ್ನಗಳು ಹಾಗೂ ಇತರೆ ವಸ್ತುಗಳ ಮೇಲೆ ಬಹಿಷ್ಕಾರ ಹೇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ವಿಡಿಯೊ ಬಿಡುಗಡೆ ಮಾಡಿರುವ ಝೆಲೆನ್ಸಿ ಅವರು ಉಕ್ರೇನ್ ವಿರುದ್ಧದ ದಾಳಿ ಮುಂದುವರಿಸಿದರೆ ಶಾಂತಿ ಪುನಸ್ಥಾಪಿಸುವ ನಿಟ್ಟಿನಲ್ಲಿ ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧಗಳು ಅನಿವಾರ್ಯ ಎಂದಿದ್ಧಾರೆ.








