ರಷ್ಯಾದ 2,800 ಸೈನಿಕರನ್ನು ಮತ್ತು 80 ಟ್ಯಾಂಕರ್ ಗಳನ್ನು ಧ್ವಂಸ ಮಾಡಿದ ಉಕ್ರೇನ್ – Saaksha Tv
ಕೀವ್: ರಷ್ಯಾದ 2,800 ಸೈನಿಕರನ್ನು ಹೊಡೆದುರುಳಿಸಿದ್ದು, 80 ಟ್ಯಾಂಕರ್ ಗಳನ್ನು ಧ್ವಂಸ ಮಾಡಿದ್ದೇವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿದೆ.
ಶುಕ್ರವಾರ, ಉಕ್ರೇನ್‌ನ 1,000 ಕ್ಕೂ ಹೆಚ್ಚು ರಷ್ಯಾದ ಸೈನಿಕರನ್ನು ಹೊಡೆದುರುಳಿಸಿದ್ದೇವೆ ಎಂದು ರಕ್ಷಣಾ ಸಚಿವಾಲಯ ಹೇಳಿಕೊಂಡಿತ್ತು, ಈಗ ಹೊಸ ಅಂಕಿ ಅಂಶಗಳ ಪ್ರಕಾರ 2,800 ಸೈನಿಕರನ್ನು ಹೊಡೆದುರುಳಿಸಿದ್ದು, 80 ಟ್ಯಾಂಕರ್ ನಾಶಪಡಿಸಲಾಗಿದೆ ಎಂದು ಹೇಳಿದೆ.
ಅಲ್ದೇ ರಷ್ಯಾದ ಸುಮಾರು 516 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 10 ವಿಮಾನಗಳು ಮತ್ತು ಏಳು ಹೆಲಿಕಾಪ್ಟರ್‌ಗಳನ್ನು ನಾಶಮಾಡಿದ್ದೇವೆ ಎಂದು ಉಕ್ರೇನ್ ಉಪ ರಕ್ಷಣಾ ಸಚಿವ ಹನ್ನಾ ಮಲಯರ್ ಅವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.
ದಾಳಿಯ ಎರಡನೇ ದಿನವಾದ ಶುಕ್ರವಾರ, ಎರಡೂ ದೇಶಗಳ ಸೈನಿಕರು ಹಲವೆಡೆ ಮುಖಾಮುಖಿಯಾಗಿದ್ದಾರೆ ಮತ್ತು ಭಾರೀ ಶಸ್ತ್ರಾಸ್ತ್ರಗಳಿಂದ ಪರಸ್ಪರ ದಾಳಿ ನಡೆಸುತ್ತಿದ್ದಾರೆ. ಶುಕ್ರವಾರ ಮುಂಜಾನೆ, ರಷ್ಯಾ ಕೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಈ ದಾಳಿಗಳಲ್ಲಿ, ಕೀವ್‌ನ ವಸತಿ ಪ್ರದೇಶಗಳು ಸಹ ಹಾನಿಗೊಳಗಾದವು. ಕೀವ್‌ನ ವಾಯುವ್ಯ ಗಡಿಯಲ್ಲಿರುವ ಉಕ್ರೇನಿಯನ್ ಪಡೆಗಳು ರಷ್ಯಾ ಸೈನಿಕರು ಕೀವ್ ಗೆ ಪ್ರವೇಶಿಸದಂತೆ ಇವಾನ್ಕಿವ್ ನದಿಯ ಮೇಲಿನ ಸೇತುವೆ ಸೇರಿದಂತೆ ಮೂರು ಸೇತುವೆಗಳನ್ನು ಕೆಡವಿದರು ಎಂದು ಹೇಳಿದ್ದಾರೆ.









