ರಷ್ಯಾದ ಶೆಲ್ ದಾಳಿಗೆ ಉಕ್ರೇನ್ ನ ಪ್ರಸಿದ್ಧ ನಟಿ ನಿಧನ
ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಮುಂದುವರಿದಿದ್ದು, ರಷ್ಯಾದ ದಾಳಿಗೆ ಉಕ್ರೇನಿನ ಜನಪ್ರಿಯ ನಟಿಯೊಬ್ಬರು ಸಾವನ್ನಪ್ಪಿದ್ದಾರೆ.
ನಟಿ ಒಕ್ಸಾನಾ ಶ್ವೇಟ್ಸ್ನ್ನು(67) ಮೃತ ದುರ್ದೈವಿ. ಕೀವ್ ನಗರದ ರೆಸಿಡೆನ್ಶಿಯಲ್ ವಸತಿ ಕಟ್ಟಡದ ಮೇಲೆ ರಷ್ಯಾ ನಡೆಸಿದ ರಾಕೆಟ್ ಶೆಲ್ ದಾಳಿಗೆ ಇವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಯಂಗ್ ಥಿಯೇಟರ್ ತಂಡ ಹೇಳಿಕೆ ನೀಡಿದೆ. ಇನ್ನು ಒಕ್ಸಾನಾ ಶ್ವೆಟ್ಸ್ಗೆ ಸ್ಥಳೀಯ ಸರ್ಕಾರ ಉಕ್ರೇನ್ನ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ ‘ಉಕ್ರೇನ್ನ ಗೌರವಾನ್ವಿತ ಕಲಾವಿದೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಫೆಬ್ರವರಿ 24 ರಂದು ಉಕ್ರೇನ್ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಷ್ಯಾಗೆ ಈವರೆಗೂ ಮೇಲುಗೈ ಸಾಧಿಸಲು ಆಗುತ್ತಿಲ್ಲ. ಈ ವಿಶೇಷ ಕಾರ್ಯಾಚರಣೆಯು ಉಕ್ರೇನಿಯನ್ ಮಿಲಿಟರಿ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
ಆದರೆ ಯುಎನ್ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ಪ್ರಕಾರ, ಸಂಘರ್ಷದ ಆರಂಭದಿಂದಲೂ ಉಕ್ರೇನ್ನಲ್ಲಿ ಸುಮಾರು 600 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.
ಈ ನಡುವೆ ಚೆರ್ನಿಹೀವ್ನಲ್ಲಿ ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ ನಡೆಸಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಒಂದು ಹಂತದಲ್ಲಿ ತೀವ್ರ ಒತ್ತಡದಲ್ಲಿರುವ ರಷ್ಯಾ ಪಡೆಗಳು, ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಉಕ್ರೇನ್ ಆರೋಪಿಸಿದೆ.









