ಭಾರತ ಸೇರಿದಂತೆ 4 ರಾಷ್ಟ್ರಗಳ ರಾಯಭಾರಿಗಳನ್ನ ವಜಾ ಮಾಡಿದ ಉಕ್ರೇನ್ ಅಧ್ಯಕ್ಷ..
ಭಾರತ ಸೇರಿದಂತೆ ಇತರ 4 ರಾಷ್ಟ್ರಗಳಿಗೆ ಉಕ್ರೇನ್ ರಾಯಭಾರಿಗಳನ್ನ ವಜಾಗೊಳಿಸಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಶನಿವಾರದಂದು ಆದೇಶಿಸಿದ್ದಾರೆ.
ಜರ್ಮನಿ, ಭಾರತ, ಜೆಕ್ ರಿಪಬ್ಲಿಕ್, ನಾರ್ವೆ ಮತ್ತು ಹಂಗೇರಿಯಲ್ಲಿ ಉಕ್ರೇನ್ ರಾಯಭಾರಿಗಳನ್ನ ರದ್ದು ಮಾಡಿ ಉಕ್ರೇನ್ ಅಧ್ಯಕ್ಷ ಕ್ರಮ ಕೈಗೊಂಡಿದ್ದಾರೆ. ಆದರೆ ಈ ಕ್ರಮಕ್ಕೆ ಯಾವುದೇ ಕಾರಣಗಳನ್ನ ನೀಡಿಲ್ಲ. ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಉಕ್ರೇನ್‌ಗೆ ಅಂತರರಾಷ್ಟ್ರೀಯ ಬೆಂಬಲ ಮತ್ತು ಮಿಲಿಟರಿ ನೆರವು ನೀಡುವಂತೆ ಝೆಲೆನ್ಸ್ಕಿ ತನ್ನ ರಾಜತಾಂತ್ರಿಕರನ್ನು ಒತ್ತಾಯಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳಿಂದ ಪಡೆದ ಶಸ್ತ್ರಾಗಳಿಂದ ರಷ್ಯ ವಶಪಡಿಸಿಕೊಂಡಿರುವ ಇಂಚಿನಷ್ಟು ಭೂಮಿಯನ್ನ ವಶಪಡಿಸಿಕೊಳ್ಳುತ್ತೇನೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ಹಿಂದೆ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ದಾಳಿ ಶನಿವಾರವೂ ಮುಂದುವರಿದಿದೆ. ಮರಿಯುಪೋಲ್ ಮತ್ತು ಡೊನೆಟ್ಸ್ಕ್ ಸೇರಿದಂತೆ ಹಲವಾರು ನಗರಗಳ ಮೇಲೆ ರಷ್ಯಾ ಪಡೆಗಳು ಬಾಂಬ್‌ಗಳು ಮತ್ತು ಶೆಲ್ ದಳಿ ನಡೆಸಿವೆ. ಡೊನೆಟ್ಸ್ಕ್ನಲ್ಲಿ ನಡೆದ ದಾಳಿಯಲ್ಲಿ 5 ಜನರು ಸಾವನ್ನಪ್ಪಿದ್ದು, 7 ಜನರು ಗಾಯಗೊಂಡಿದ್ದಾರೆ. ಇದರ ಜೊತೆಗೆ, ಮಧ್ಯ ಉಕ್ರೇನ್‌ನ ಎರಡು ನಗರಗಳ ಮೇಲೆ ರಷ್ಯಾದ ಮಿಲಿಟರಿ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. Ukrainian President Announced The Sacking Of Ukraine Ambassadors To Germany India