ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕಾರು ಅಫಘಾತ – ಪ್ರಾಣಾಪಾಯದಿಂದ ಪಾರು..
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಾರು ಅಪಘಾತಕ್ಕೀಡಾಗಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಝೆಲೆನ್ಸ್ಕಿಯ ವಕ್ತಾರರು ಈ ಮಾಹಿತಿ ನೀಡಿದರು.
ಝೆಲೆನ್ಸ್ಕಿ ವಕ್ತಾರ ಸೆರ್ಹಿ ನ್ಯಾಕಿಫೊರೊವ್ ಗುರುವಾರ ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡಿದ್ದು, ಅಧ್ಯಕ್ಷರ ಕಾರು ಮತ್ತು ಮೋಟಾರ್‌ಸೈಕಲ್‌ಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಹೇಳಿದರು.
ಅಪಘಾತದ ನಂತರ ವೈದ್ಯರು ಜೆಲೆನ್ಸ್ಕಿ ಅವರನ್ನ ಪರೀಕ್ಷಿಸಿದರು ಮತ್ತು ಅವರು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಉಕ್ರೇನಿಯನ್ ಪ್ರಮುಖ ಸುದ್ದಿ ಪೋರ್ಟಲ್ ವರದಿ ಮಾಡಿದೆ. ಅಪಘಾತದ ಕುರಿತು ಕಾನೂನು ಸಂಸ್ಥೆಗಳು ಕೂಲಂಕುಷವಾಗಿ ತನಿಖೆ ನಡೆಸಲಿವೆ ಎಂದು ವಕ್ತಾರರು ತಿಳಿಸಿದ್ದಾರೆ.
ಮತ್ತೊಂದೆಡೆ, ಕಳೆದ ಎಂಟು ತಿಂಗಳಿಂದ ನಡೆಯುತ್ತಿರುವ ಯುದ್ಧವು ಈಗ ಹೊಸ ಹಂತವನ್ನ ಪ್ರವೇಶಿಸಿದ್ದು, ಕಳೆದ ಆರು ತಿಂಗಳಿನಿಂದ ರಷ್ಯಾದ ಪಡೆಗಳ ವಶದಲ್ಲಿದ್ದ ಉಕ್ರೇನ್‌ನ ಪ್ರಮುಖ ಆಯಕಟ್ಟಿನ ನಗರವಾದ ಇಜಿಯಮ್ ಅನ್ನು ಉಕ್ರೇನ್ ಸೇನೆಯು ಮರಳಿ ವಶಪಡಿಸಿಕೊಂಡಿದೆ.
Ukrainian President Volodymyr Zelenskyy’s car was involved in an accident in Kyiv








