ಪ್ರಕರಣದಲ್ಲಿ ನನ್ನನ್ನ ಉಮಾಪತಿ ಬಳಸಿಕೊಂಡಿದ್ದಾರೆ : ಅರುಣಾ ಕುಮಾರಿ
ಬೆಂಗಳೂರು : ನಟ ದರ್ಶಶ್ ಗೆ ವಂಚನೆ ಯತ್ನ ಕೇಸ್ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಕ್ಷಣದಿಂದ ಕ್ಷಣಕ್ಕೆ ಪ್ರಕರಣ ರೋಚಕ ತಿರುವು ಪಡೆದುಕೊಳ್ಳುತ್ತಿದೆ.
ಅರುಣಾ ಕುಮಾರಿ ಏಪ್ರಿಲ್ ನಿಂದ ಪರಿಚಯ ಎಂದು ನಿರ್ಮಾಪಕ ಉಮಾಪತಿ ಒಪ್ಪಿಕೊಂಡ ಬೆನ್ನಲ್ಲೆ ನನ್ನನ್ನ ಉಮಾಪತಿ ಬಳಸಿಕೊಂಡಿದ್ದಾರೆ ಎಂದು ಪ್ರಕರಣ ಪ್ರಮುಖ ಆರೋಪಿ ಅರುಣಾ ಕುಮಾರಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಪ್ರಕರಣದಲ್ಲಿ ನನ್ನನ್ನ ಉಮಾಪತಿ ಬಳಸಿಕೊಂಡಿದ್ದಾರೆ. ಲೋನ್ ಅಪ್ಲೈ ಮಾಡೋಕು, ಅಪ್ರೊಚ್ ಮಾಡೋದು ವ್ಯತ್ಯಾಸವಿದೆ.
ನನಗೆ ನನ್ನ ಕುಟುಂಬಕ್ಕೆ ಸುಸೈಡ್ ಮಾಡ್ಕೋಬೇಕು ಅನಿಸ್ತಿದೆ. ಉಮಾಪತಿಗೆ ಇದರಿಂದ ಏನು ಲಾಭ ಅಂತ ಗೊತ್ತಿಲ್ಲ.
2 ದಿನ ವೈಟ್ ಮಾಡಿದ್ರೆ ಸತ್ಯ ಗೊತ್ತಾಗುತ್ತೆ. ವಿಚಾರಣೆಯಲ್ಲಿ ಎಲ್ಲವನ್ನು ಹೇಳಿದೀನಿ ಎಂದು ಅರುಣಾ ಕುಮಾರಿ ನಿರ್ಮಾಪಕ ಉಮಾಪತಿ ವಿರುದ್ಧ ಆರೋಪ ಮಾಡಿದ್ದಾರೆ.