umashree car accident
ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ವೈದ್ಯೆ ಸಾವು
ಹುಬ್ಬಳ್ಳಿ: ನಟಿ ಹಾಗೂ ರಾಜಕಾರಣಿ ಉಮಾಶ್ರೀ ಅವರ ಕಾರು ಅಪಘಾತಕ್ಕೀಡಾಗಿದ್ದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3ಕ್ಕೇರಿದೆ. ಇದೇ ತಿಂಗಳ 21 ರಂದು ಬಂಡಿವಾಡ ಗ್ರಾಮದ ಬಳಿ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿತ್ತು.
ರೋಚಕವಾದ ಸಾಹಸಮಯ ಜನಪದ ಕಥೆಯನ್ನು ಹೊಂದಿರುವ ತುಳುನಾಡಿನ ವೀರಪುರುಷ ಅಗೋಳಿ ಮಂಜಣ್ಣ ಸಿನಿಮಾ ಟೀಸರ್ ಬಿಡುಗಡೆ
ಗಾಯಾಳುಗಳ ಪೈಕಿ ಒಬ್ಬರಾಗಿದ್ದ ಡಾ. ಸ್ಮಿತಾ ಇಂದು ಮೃತಪಟ್ಟಿದ್ದಾರೆ. ಗದಗನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬೊಲೆನೋ ಕಾರಿಗೆ ಉಮಾಶ್ರೀ ಮಾಲಿಕತ್ವದ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸ್ಥಳದಲ್ಲಿಯೇ ಡಾ. ಸ್ಮಿತಾ ತಾಯಿ ಶೋಭಾ ಕಟ್ಟಿ ಹಾಗೂ ಇವರ ವಾಹನ ಚಾಲಕ ಸಂದೀಪ ವಿಭೂತಿಮಠ ಮೃತಪಟ್ಟಿದ್ದರು. ಸ್ಮಿತಾ ಸೇರಿದಂತೆ ಇನ್ನೊವಾ ಚಾಲಕ ಶಿವಕುಮಾರ ಬಿಡನಾಳ ಗಾಯಗೊಂಡಿದ್ದರು. ತೀವ್ರ ಗಾಯಗೊಂಡು ಪ್ರಜ್ಞಾಹೀನವಾಗಿದ್ದ ಡಾ. ಸ್ಮಿತಾ ಕಟ್ಟಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಆ ಮೂಲಕ ಬೊಲೆನೋ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.
umashree car accident
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








