ಸಿಡಿ ವಿಚಾರವಾಗಿ ನೋ ಕಮೇಂಟ್ಸ್ – ಉಮೇಶ್ ಕತ್ತಿ
ಬೆಳಗಾವಿ : ಬೆಳಗಾವಿಯಲ್ಲಿ ಸಚಿವ ಉಮೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಸಿಡಿ ಕೇಸ್ ವಿಚಾರವಾಗಿ ಮಾತನಾಡಲು ನಿರಾಕರಿಸಿದ್ದಾರೆ. ಸಿಡಿ ವಿಚಾರವಾಗಿ ನೋ ಕಮೆಂಟ್ಸ್ ಎನ್ನುತ್ತಾ ಹೊರಟು ಹೋಗಿದ್ದಾರೆ.
ಇದೇ ವೇಳೆ ಬೆಳಗಾವಿ ಲೋಕಸಭೆ ಉಪ ಚುನಾವಣೆ ಕುರಿತು ಮಾತನಾಡಿದ ಅವರು 3 ಬೈ ಎಲೆಕ್ಷನಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.
ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಸುರೇಶ್ ಅಂಗಡಿ ಪತ್ನಿ ಮಂಗಲ ಅಕ್ಕನಿಗೆ ಟಿಕೆಟ್ ನೀಡಿದ್ದಾರೆ. ಸುರೇಶ್ ಅಂಗಡಿ ಅವರನ್ನ ಗೆಲ್ಲಿಸಿದಂತೆ ಮತದಾರರು ಮಂಗಲ ಅಕ್ಕಳನ್ನ ಗೆಲ್ಲಿಸುತ್ತಾರೆ. ಅವರು ಸಹ ಸುರೇಶ್ ಅಂಗಡಿ ಅವರಂತೆ ಅಭಿವೃದ್ಧಿ ಕೆಲಸಗಳನ್ನ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆ.ಹೆಚ್.ಮುನಿಯಪ್ಪರನ್ನ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿ : ವರ್ತೂರು ಪ್ರಕಾಶ್
“ರಾಷ್ಟ್ರದ ಎದುರು ನಾಚಿಕೆ ಪಡುವ ಸ್ಥಿತಿಯಲ್ಲಿ ನಿಂತಿದೆ ರಾಜ್ಯ”
ನಡುರಸ್ತೆಯಲ್ಲಿ ಕಾರಿಗೆ ಬೆಂಕಿ : ಪ್ರಯಾಣಿಕರು ಪಾರು