Umesh Katti | ಲಖನ್ ಬರುವುದರಿಂದ ಬಿಜೆಪಿಯಲ್ಲಿ ಬದಲಾವಣೆ ಆಗಲ್ಲ
ಅಥಣಿ : ರಮೇಶ್ ಜಾರಕಿಹೊಳಿ ಬಿಜೆಪಿ ಪಾಳಯ ಸೇರಿದ ನಂತರ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ನಡೆಯಲು ಶುರುವಾಗಿದೆ. ಇದು ಜಗತ್ ಜಾಹೀರಾಗಿರುವ ವಿಚಾರ.
ಅದರ ಮುಂದುವರೆದ ಭಾಗವಾಗಿ ಸಚಿವ ಉಮೇಶ್ ಕತ್ತಿ ಲಖನ್ ಜಾರಕಿಹೊಳಿ ಬಗ್ಗೆ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕತ್ತಿ, ಲಖನ್ ಜಾರಕಿಹೊಳಿ ಪಕ್ಷೇತರ ಬೆಂಬಲಿತ ವಿಧಾನ ಪರಿಷತ್ ಸದಸ್ಯರು.
ಭಾರತೀಯ ಜನತಾ ಪಕ್ಷಕ್ಕೆ ಅವರ ಅಗತ್ಯವಿಲ್ಲ, ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರು ಹಾಗೂ ಸಮರ್ಪಕ ಕಾರ್ಯಕರ್ತರು ಇರುವುದರಿಂದ ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಅವರ ಪ್ರಚಾರ ಆಗತ್ಯವಿಲ್ಲ ಎಂದಿದ್ದಾರೆ.
ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಬರಲಿ, ಬರೋರಿಗೆ ಬೇಡ ಎನ್ನಲ್ಲ.
ಅವರು ಪಕ್ಷಕ್ಕೆ ಬರುವುದರಿಂದ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಉಮೇಶ್ ಕತ್ತಿ, ಲಖನ್ ಬಿಜೆಪಿಗೆ ಸೇರಿಲ್ಲ, ಹೀಗಾಗಿ ಅವರ ಬೆಂಬಲದ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ, ಯಾರ ಬೆಂಬಲವೂ ನಮಗೆ ಬೇಡ ಎಂದು ತಿರುಗೇಟು ನೀಡಿದ್ದಾರೆ.
ಇದು ಬೆಳಗಾವಿ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬೋದನ್ನ ಮತ್ತೆ ಸಾಭೀತು ಮಾಡಿದೆ. umesh-katti-reaction about lakhan-jarkiholi