ಕೊಹ್ಲಿ ವಿಕೆಟ್ ಪಡೆಯೋದು ನನ್ನ ಗುರಿ : ಉಮ್ರಾನ್ ಮಲಿಕ್
ಐಪಿಎಲ್-2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಎದೆ ಬಡಿತ ಹೆಚ್ಚಿಸುತ್ತಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ನಾಲ್ಕು ವಿಕೆಟ್ ಪಡೆದರು.
ಶನಿವಾರ (ಏಪ್ರಿಲ್ 23) ನಡೆಯಲಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಲಿಕ್ ತಮ್ಮ ಫಾರ್ಮ್ ಅನ್ನು ಮುಂದುವರಿಸುವ ನಿರೀಕ್ಷೆಯಿದೆ.
ಈ ಋತುವಿನಲ್ಲಿ ಇದುವರೆಗೆ ಆರು ಪಂದ್ಯಗಳನ್ನು ಆಡಿರುವ ಮಲಿಕ್ 10 ವಿಕೆಟ್ ಪಡೆದಿದ್ದಾರೆ.
ಇನ್ನು ಆರ್ ಸಿ ಬಿ ವಿರುದ್ಧದ ಪಂದ್ಯಕ್ಕಾಗಿ ಮಲಿಕ್ ತುಸು ಹೆಚ್ಚಾಗಿಯೇ ಬೆವರು ಹರಿಸುತ್ತಿದ್ದಾರೆ.
ನಾವು ನಮ್ಮ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದ್ದೇವೆ.
ಈ ಪಂದ್ಯದಲ್ಲಿ ಕೊಹ್ಲಿ ಅವರನ್ನು ಔಟ್ ಮಾಡೋದು ನನ್ನ ಗುರಿ ಎಂದಿದ್ದಾರೆ.
ಅಲ್ಲದೇ ನಾನು ರಾಹುಲ್, ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ.
ವಿರಾಟ್ ಅವರನ್ನಔಟ್ ಮಾಡೋದು ನನ್ನ ದೊಡ್ಡ ಕನಸು. ನಾನು ನೂರಕ್ಕೆ ನೂರು ಎಫೆಕ್ಟ್ ಹಾಕುತ್ತೇನೆ. ಉಳಿದದ್ದು ದೇವರ ಕೈಯಲ್ಲಿದೆ ಎಂದಿದ್ಧಾರೆ.