ಬುಲೆಟ್ ಎಕ್ಸ್ ಪ್ರೆಸ್ ಉಮ್ರಾನ್ ಮಲಿಕ್ ಗೆ ಬಂಪರ್ ಆಫರ್
ಸನ್ ರೈಸಸ್ ಹೈದರಾಬಾದ್ ನ ಬೌಲರ್ ಉಮ್ರಾನ್ ಮಲಿಕ್ ಗೆ ಬಂಪರ್ ಆಫರ್ ಸಿಕ್ಕಿದೆ.
ಟಿ-20 ವಿಶ್ವಕಪ್ 2021 ಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾಗೆ ನೆಟ್ ಬೌಲರ್ ಆಗಿ ಮಲಿಕ್ ಆಯ್ಕೆ ಆಗಿದ್ದಾರೆ.
ಈ ಬಗ್ಗೆ ಐಎಎಸ್ ಎಸ್ ಅನ್ನೋ ವಾರ್ತಾ ಸಂಸ್ಥೆ ಟ್ವೀಟ್ ಮಾಡಿದೆ.
ಟಿ-20 ವಿಶ್ವಕಪ್ ನಲ್ಲಿ ಆಡದೇ ಇದ್ದರೂ ಐಸಿಸಿ ಮೇಜರ್ ಟೂರ್ನಿಗಳಲ್ಲಿ ನೆಟ್ ಬೌಲರ್ ಆಗುವುದು ಕೂಡ ಅದೃಷ್ಠದ ವಿಷಯವೇ.
ಒಂದು ವೇಳೆ ತಂಡದಲ್ಲಿ ಯಾರಾದ್ರೂ ಇಂಜೂರಿ ಆದ್ರೆ ಮಲಿಕ್ ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವುದು ಖಾಯಂ.
ಅಂದಹಾಗೆ ಮಲಿಕ್ ಸದ್ಯ ಭಾರತದ ಬೌಲಿಂಗ್ ಸೆನ್ಸೇಷನ್ ಆಗಿದ್ದು, ತಮ್ಮ ವೇಗದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಪ್ರತಿ ಎಸೆತವನ್ನು ಕನಿಷ್ಠ 140 ಕಿಲೋ ಮೀಟರ್ ವೇಗದಲ್ಲಿ ಎಸೆಯುವ ಮಲಿಕ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗಂಟೆ 150 ಕಿಲೋ ಮೀಟರ್ ವೇಗದಲ್ಲಿ ಬಾಲ್ ಎಸೆದಿದ್ದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 152.95 ಕೀಲೋ ಮೀಟರ್ ವೇಗದಲ್ಲಿ ಬಾಲ್ ಎಸೆದು ಚರಿತ್ರೆ ಸೃಷ್ಠಿಸಿದ್ದಾರೆ.









