ಅಂಡರ್-19 ಏಷ್ಯಾ ಕಪ್ : 237 ರನ್ ಗಳಿಗೆ ಭಾರತ ಆಲೌಟ್ Under-19 Asia Cup saaksha tv
ದುಬೈನಲ್ಲಿ ನಡೆಯುತ್ತಿರುವ ಅಂಡರ್ 19 ಏಷ್ಯಾ ಕಪ್ ಟೂರ್ನಿಯಲ್ಲಿ ಬದ್ಧವೈರಿಗಳು ಮುಖಾಮುಖಿಯಾಗಿವೆ.
ದುಬೈ ಅಂಗಳದಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಗುದ್ದಾಡುತ್ತಿದ್ದು, ಮೊದಲು ಬ್ಯಾಟ್ ಮಾಡಿರುವ ಭಾರತ ತಂಡ, 237 ರನ್ ಗಳಿಸಿದೆ.
ಆ ಮೂಲಕ ಪಾಕಿಸ್ತಾನಕ್ಕೆ ಪಂದ್ಯ ಗೆಲ್ಲಲು 238 ರನ್ ಗಳ ಗುರಿಯನ್ನ ನೀಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ ರಘುವಂಶಿ ಮೊದಲ ಓವರ್ ನಲ್ಲೇ ಡಕೌಟ್ ಆದರು.
ಇದಾದ ಬಳಿಕ ಶೇಕ್ ರಸೀದ್ 6 ರನ್, ನಾಯಕ ಯಶ್ ಧೂಳ್ ಶೂನ್ಯ. ನಿಶಾಂತ್ 8 ರನ್ ಗಳಿಗೆ ಪೇವಿಲಿಯನ್ ಸೇರಿಕೊಂಡರು..
ಈ ಸಂಕಷ್ಟ ಪರಿಸ್ಥಿತಿಯಲ್ಲಿ ಆರಂಭಿಕ ಆಟಗಾರ ಹರ್ನೂರ್ ಸಿಂಗ್ ಮತ್ತು ರಾಜ್ ಭವ ಎಚ್ಚರಿಕೆಯ ಆಟವಾಡಿ ಇನ್ನಿಂಗ್ಸ್ ಕಟ್ಟಿದ್ರು.
ಈ ಹಂತದಲ್ಲಿ ರಾಜ್ ಭವ 25 ರನ್ ಗಳಿಸಿ ಔಟ್ ಆದ್ರು, ಇದಾದ ಬಳಿಕ ಹರ್ನೂರ್ ಸಿಂಗ್ ಜೊತೆ ಸೇರಿದ ಆರಾಧ್ಯ ಯಾದವ್, ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಆಗ 46 ರನ್ ಗಳಿಸಿದ್ದ ಹರ್ನೂರ್ ವಿಕೆಟ್ ಕೈ ಚೆಲ್ಲಿಸಿದರು. ಇದಾದ ಬಳಿಕ ಕುಶಾಲ್ ತಾಂಬೆ ಜೊತೆಗೂಡಿದ ಆರಾಧ್ಯ ತಂಡದ ಮೊತ್ತ ಹೆಚ್ಚಿಸುವತ್ತ ಗಮನ ಹರಿಸಿದರು.
ಅಲ್ಲದೇ ಆರಾಧ್ಯ ಅರ್ಧಶತಕ ಸಿಡಿಸಿ ಔಟ್ ಆದರು. ಇದಾದ ಬಳಿಕ ಕೊನೆಯಲ್ಲಿ ರಾಜ್ ವರ್ಧನ್ ಮಿಂಚಿನ 33 ರನ್ ಗಳ ನೆರವಿನಿಂದ ಭಾರತ 49 ಓವರ್ ಗಳಿಗೆ 237 ರನ್ ಗಳಿಗೆ ಆಲೌಟ್ ಆಯಿತು.









