Under-19 World Cup Final : ಧೂಳೆಬ್ಬಿಸಿದ ರಾಜ್ ಬಾವಾ, ಹೊಸ ದಾಖಲೆ
ವೆಸ್ಟ್ ಇಂಡೀಸ್ ನಾಡಿನಲ್ಲಿ ಭಾರತದ ಅಂಡರ್ 19 ತಂಡ ಚರಿತ್ರೆ ಸೃಷ್ಠಿಸಿದೆ. ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್ ಗಳ ಜಯದೊಂದಿಗೆ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದು ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಭಾರತದ ಬೌಲರ್ ಗಳಾದ ರಾಜ್ ಬಾವಾ ಮತ್ತು ರವಿಕುಮಾರ್ ಪೈಪೋಟಿಗೆ ಬಿದ್ದು ಇಂಗ್ಲೆಂಡ್ ಬ್ಯಾಟರ್ ಗಳ ವಿಕೆಟ್ ಪಡೆದರು. Under-19 World Cup Final raj-bawa creates history
ಮುಖ್ಯವಾರಿ ರಾಜ್ ಬಾವಾ 31 ರನ್ ಗಳನ್ನ ಬಿಟ್ಟುಕೊಟ್ಟು ಪ್ರಮುಖ ಐದು ವಿಕೆಟ್ ಕಬಳಿಸಿ ಮಿಂಚಿದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಪೈಕಿ ಜಾರ್ಜ್ ಥಾಮಸ್ (27), ವಿಲ್ ಲಕ್ಸ್ಟನ್ (4), ಜಾರ್ಜ್ ಬೆಲ್ (0), ರೆಹಾನ್ ಅಹ್ಮದ್ (10) ಮತ್ತು ಅಂತಿಮವಾಗಿ ಜೋಶುವಾ ಬೋಡೆನ್ (1) ವಿಕೆಟ್ ಪಡೆದರು. ಇದರೊಂದಿಗೆ ಭಾರತದ ಪರ ರಾಜ್ ಬಾವಾ ಅಪರೂಪದ ದಾಖಲೆ ಪಡೆದಿದ್ದಾರೆ. ಅಂಡರ್-19 ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಪರ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ಒಟ್ಟಾರೆಯಾಗಿ ನೋಡುವುದಾದರೇ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ಬೌಲರ್ ಅನ್ವರ್ ಅಲಿ 2006 ರಲ್ಲಿ ಐದು ವಿಕೆಟ್ ಪಡೆದಿದ್ದರು. ಇದಾದ ಬಳಿಕ ಅಂಡರ್ 19 ವಿಶ್ವಕಪ್ ನಲ್ಲಿ ಐದು ವಿಕೆಟ್ ಪಡೆದ ಎರಡನೇ ಬೌಲರ್ ರಾಜ್ ಬಾವಾ.
ಭಾರತದ ಯುವ ಆಟಗಾರರ ಈ ಪ್ರದರ್ಶನ ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿ ಹಿನ್ನೆಲೆಯಲ್ಲಿ ಭಾರಿ ಪ್ರಮುಖ್ಯತೆ ಪಡೆದುಕೊಂಡಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಅಂಡರ್-19 ತಂಡದ ಆಟಗಾರರಿಗೆ ಜಾಕ್ ಪಾಟ್ ಎಂದೇ ಹೇಳಬಹುದು.
ಯಂಗ್ ಇಂಡಿಯಾದ ಯಶ್ ಧುಲ್, ಹರ್ನೂರ್ ಸಿಂಗ್, ಕುಶಾಲ್ ತಾಂಬೆ, ಅನೀಶ್ವರ್ ಗೌತಮ್, ರಾಜ್ ಭಾವ್, ರಾಜವರ್ಥನ್, ವಿಕ್ಕಿ ಓಸ್ವಾಲ್, ವಾಸು ವಾಟ್ಸ್, ಪುಷ್ಪೇಂದ್ರ ಸಿಂಗ್ ರಾಥೋಡ್ ಮೆಗಾ ಹರಾಜಿನಲ್ಲಿ ಪರೀಕ್ಷೆಗೆ ಇಳಿದಿದ್ದಾರೆ.
ಈ ಒಂಭತ್ತು ಮಂದಿಯ ಪೈಕಿ ನಾಯಕ ಯಶ್ ಧುಲ್, ಆರಂಭಿಕ ಹರ್ನೂರ್ ಸಿಂಗ್, ಆಲ್ ರೌಂಡರ್‌ಗಳಾದ ರಾಜ್ ಬಾವಾ, ರಾಜವರ್ಥನ್ ಮತ್ತು ಸ್ಪಿನ್ ಬೌಲರ್ ವಿಕಿ ಓಸ್ವಾಲ್ ಒಳ್ಳೆಯ ದರಕ್ಕೆ ಖರೀದಿಯಾಗುವ ಸಾಧ್ಯತೆಗಳಿವೆ. ಮೂಖ್ಯವಾಗಿ ಫೈನಲ್ ನಲ್ಲಿ ಐದು ವಿಕೆಟ್ ಪಡೆದ ರಾಜ್ ಬಾವಾಗೆ ಹರಾಜಿನಲ್ಲಿ ಜಾಕ್ ಪಾಟ್ ಹೊಡೆಯುವ ಸಾಧ್ಯತೆ ಇದೆ.








