ಅಂಡರ್ 19 ವಿಶ್ವಕಪ್:ಆಸ್ಟ್ರೇಲಿಯಾ ತಂಡದಲ್ಲಿ ತಮಿಳುನಾಡು ಪ್ಲೇಯರ್ Australia saaksha tv
ಭಾರತದ ಹಲವಾರು ಕ್ರಿಕೆಟಿಗರಿ ಪ್ರತಿಭೆ ಇದ್ದರೂ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಗುತ್ತಿಲ್ಲ.
ಯಾಕಂದರೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಅಷ್ಟು ಸುಲಭವಲ್ಲ. ಸ್ಥಾನ ಗಟ್ಟಿಮಾಡಿಕೊಂಡಿರುವವರು ಮತ್ತಷ್ಟು ಉತ್ತಮ ಪ್ರದರ್ಶನದ ಮೂಲಕ ತಂಡದಲ್ಲಿ ಖಾಯಂ ಆಟಗಾರರಾಗಿದ್ದಾರೆ.
ಹೀಗಾಗಿ ಭಾರತದ ಹಲವು ಕ್ರಿಕೆಟ್ ಪ್ರತಿಭೆಗಳು ವಿದೇಶಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ.
ನಿವೇದನ್ ರಾಧಾಕೃಷ್ಣನ್, 18 ವರ್ಷದ ಈ ಕ್ರಿಕೆಟಿಗನ ಹೆಸರು ಹಲವರಿಗೆ ಗೊತ್ತಿಲ್ಲ. ಆದರೆ ಈ ಕ್ರಿಕೆಟಿಗ ತಮಿಳುನಾಡು ಪ್ರೀಮಿಯರ್ ಲೀಗ್ ಹಾಗೂ ಐಪಿಎಲ್ ತಂಡ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ತಮಿಳುನಾಡು ಮೂಲದ ಈ ಕ್ರಿಕೆಟರ್ ಎರಡೂ ಕೈಗಳಿಂದಲೂ ಸ್ಪಿನ್ ಬೌಲಿಂಗ್ ಮಾಡುವ ಮಿಸ್ಟ್ರಿ ಸ್ಪಿನ್ನರ್..!
ತಮಿಳುನಾಡು ಪ್ರೀಮಿಯರ್ ಲೀಗ್ ಮಾಜಿ ಆಟಗಾರ ನಿವೇದನ್ ರಾಧಕೃಷ್ಣನ್ 2021ರ 19 ವಯೋಮಿತಿ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತಾಸ್ಮೆನಿಯಾ ಪರ ನಿವೇದನ್ ಮೊದಲ ಬಾರಿ ವೃತ್ತಿಪರ ಗುತ್ತಿಗೆಯನ್ನು ಪಡೆದುಕೊಂಡಿದ್ದರು. ಭಾರತೀಯ ಮೂಲದ ಯುವ ಸ್ಪಿನ್ನರ್ನ ಪ್ರತಿಭೆಯನ್ನು ಗುರುತಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಮುಂಬರುವ 19 ವಯೋಮಿತಿ ವಿಶ್ವಕಪ್ ಟೂರ್ನಿಗೆ ತಮ್ಮ ತಂಡದಲ್ಲಿ ಅವಕಾಶ ಕಲ್ಪಿಸಿದೆ.
2019ರಲ್ಲಿ ನಿವೇದನ್ ಪಾಕಿಸ್ತಾನ ವಿರುದ್ಧ 16 ವಯೋಮಿತಿ ಆಸ್ಟ್ರೇಲಿಯಾ ತಂಡದಲ್ಲಿ ಆಡಿದ್ದರು. ಈ ಐದು ಪಂದ್ಯಗಳ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ನಿವೇದನ್ ಎಲ್ಲರ ಗಮನ ಸೆಳೆದಿದ್ದರು. ಆ ಸರಣಿಯಲ್ಲಿ ಅವರು 172 ರನ್ ಹಾಗೂ ಎಂಟು ವಿಕೆಟ್ಗಳನ್ನು ಪಡೆದು ಮಿಂಚಿದ್ದರು.