ಐಎನ್ಎಸ್ ಹಮ್ಲಾದಲ್ಲಿ ನಿರ್ಮಾಣ ಹಂತದ ಶೆಡ್ ಕುಸಿತ – 11 ಮಂದಿಗೆ ಗಾಯ
ಮುಂಬೈ: ಮುಂಬೈನ ಮಾಲಾಡ್ ಪ್ರದೇಶದ ನೌಕಾ ನೆಲೆಯ ಐಎನ್ಎಸ್ ಹಮ್ಲಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಶೆಡ್ ಕುಸಿದಿದೆ.. ಘಟನೆಯಲ್ಲಿ 11 ಕಾರ್ಮಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ವರದಕ್ಷಿಣೆ ವಿರುದ್ಧ ಹೋರಾಟಕ್ಕೆ ಕೇರಳ ರಾಜ್ಯಪಾಲರ ಸಾಥ್ – ಒಂದು ದಿನದ ಉಪವಾಸ
ಐಎನ್ಎಸ್ ಹಮ್ಲಾದ ಮುಖ್ಯ ಗೇಟ್ ಬಳಿ ತಾತ್ಕಾಲಿಕ ಶೆಡ್ ಅನ್ನು ನಿರ್ಮಿಸಲಾಗುತ್ತಿತ್ತು. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ನೌಕಾ ನೆಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನೂ ಈಗಾಗಲೇ 10 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಇನ್ನೊಬ್ಬರನ್ನು ಟ್ರೈಡೆಂಟ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.. ಘಟನೆಯಲ್ಲಿ ಅದೃಷ್ವಶಾತ್ ಸಾವುಗಳು ಸಂಭವಿಸಿಲ್ಲ.
ಜಮ್ಮು – ಕಾಶ್ಮೀರ : ಸತತ ಎರಡನೇ ವರ್ಷವೂ ಹುತಾತ್ಮರ ದಿನ ಆಚರಣೆ ಇಲ್ಲ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 1.91 ಕೋಟಿ ಡೋಸ್ಗಳು ಲಭ್ಯ