ಉದ್ಯೋಗ ಪಡೆಯಲು ತಂದೆಯನ್ನು ಹತ್ಯೆ ಮಾಡಿದ ನಿರುದ್ಯೋಗಿ ಮಗ unemployed son killed father
ಜಾರ್ಖಂಡ್, ನವೆಂಬರ್23: ಉದ್ಯೋಗದ ಅನ್ವೇಷಣೆಯಲ್ಲಿದ್ದ, ನಿರುದ್ಯೋಗಿ ಮಗ ತನ್ನ ತಂದೆಯನ್ನು ಕೊಂದಿರುವ ಘಟನೆ ಜಾರ್ಖಂಡ್ ನಿಂದ ವರದಿಯಾಗಿದೆ. unemployed son killed father
ಪೊಲೀಸರ ಪ್ರಕಾರ, ಮಗನು ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ನ ಉದ್ಯೋಗಿಯಾದ ತನ್ನ 55 ವರ್ಷದ ತಂದೆಯನ್ನು, ಸಾರ್ವಜನಿಕ ವಲಯದ ಅಂಡರ್ಟೇಕಿಂಗ್ (ಪಿಎಸ್ಯು) ಕಂಪನಿಯಲ್ಲಿ ಉದ್ಯೋಗ ಪಡೆಯುವ ಸಲುವಾಗಿ ಹತ್ಯೆ ಮಾಡಿದ್ದಾನೆ.

ಮೃತ ಕೃಷ್ಣ ರಾಮ್ ಮುಖ್ಯ ಭದ್ರತಾ ಸಿಬ್ಬಂದಿಯಾಗಿದ್ದು, ರಾಮ್ಘರ್ ಜಿಲ್ಲೆಯ ಬಾರ್ಕಕಾನಾದ ಸಿಸಿಎಲ್ನ ಕೇಂದ್ರ ಕಾರ್ಯಾಗಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ಮುಂಜಾನೆ ಅವರು ಗಂಟಲು ಸೀಳಿಕೊಂಡು ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಸ್ಸಾಂನ ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ – 60 ಲಕ್ಷ ರೂ ದೋಚಿದ ಶಸ್ತ್ರಸಜ್ಜಿತ ದರೋಡೆಕೋರರು
ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಪ್ರಕಾಶ್ ಚಂದ್ರ ಮಹತೋ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರಾಮ್ ಅವರನ್ನು ಅವರ 35 ವರ್ಷದ ಹಿರಿಯ ಮಗ ಬುಧವಾರ ರಾತ್ರಿ ಬಾರ್ಕಕಾನಾದಲ್ಲಿ ಗಂಟಲು ಕತ್ತರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿರುವುದಾಗಿ ವರದಿಗಳು ಹೇಳಿವೆ.ಅಪರಾಧಕ್ಕೆ ಬಳಸಿದ ಸಣ್ಣ ಚಾಕು ಮತ್ತು ಮೃತ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ರಾಮ್ ಅವರ ಹಿರಿಯ ಮಗ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಎಲ್ನ ನಿಬಂಧನೆಗಳ ಪ್ರಕಾರ, ನೌಕರನು ತನ್ನ ಸೇವೆಯ ಅವಧಿಯಲ್ಲಿ ಮೃತಪಟ್ಟರೆ ಕಾನೂನುಬದ್ಧವಾಗಿ ಅವಲಂಬಿತರಿಗೆ ಕೆಲಸ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1330532549051838471?s=19
https://twitter.com/SaakshaTv/status/1330532982000660486?s=19
https://twitter.com/SaakshaTv/status/1330533310586626056?s=19








