ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ | ಆದೇಶ ಹೊರಡಿಸಿದ ಸರಕಾರ Saaksha Tv
ಬೆಂಗಳೂರು : ರಾಜ್ಯ ಸರಕಾರ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಸರ್ಕಾರದ ಈ ಆದೇಶದಿಂದಾಗಿ ರಾಜ್ಯದ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಾಗಿದೆ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಿ ಬರಬೇಕಿದೆ.
ಪ್ರಕರಣ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದು, ಫೆಬ್ರವರಿ 8 ರಂದು ಅರ್ಜಿ ವಿಚಾರಣೆ ನಡೆಯಲಿದೆ. ಕೋರ್ಟ್ ಮುಂದೆ ಸರ್ಕಾರ ತನ್ನ ನಿಲುವು ವ್ಯಕ್ತಪಡಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ, ನಿಯಮಗಳ ಕುರಿತು ಮಾಹಿತಿ ಪಡೆದರು.
ಸಮವಸ್ತ್ರ ಕಡ್ಡಾಯ ಕುರಿತು ಕೇರಳ, ಬಾಂಬೆ ಹೈಕೋರ್ಟ್, ಅಪೆಕ್ಸ್ ಕೋರ್ಟ್ ಗಳ ತೀರ್ಪುಗಳ ಕುರಿತು ಪರಾಮರ್ಶೆ ನಡೆಸಿದ್ದು, ಶೈಕ್ಷಣಿಕ ವ್ಯವವಸ್ಥೆಯಲ್ಲಿ ಸಮಾನತೆಯ ಪ್ರತೀಕವಾಗಿ ಸಮವಸ್ತ್ರ ಕಡ್ಡಾಯಗೊಳಿಸುವ ನಿಲುವನ್ನೇ ಪ್ರತಿಪಾದಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.