ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಂಚನೆ ಪ್ರಕರಣ – ಸಿಬಿಐ ನಿಂದ ಮೂರು ಚಾರ್ಜ್‌ಶೀಟ್
150 ಕೋಟಿ ರೂ.ಗಳ ಬ್ಯಾಂಕ್ ವಂಚನೆಯ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದೇವೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸುಮಾರು 150 ಕೋಟಿ ರೂ. ಮೋಸ ಮಾಡಿದ್ದಕ್ಕಾಗಿ ಖಾಸಗಿ ಕಂಪನಿಗಳು, ಅದರ ನಿರ್ದೇಶಕರು ಮತ್ತು ಪಬ್ಲಿಕ್ ಸರ್ವೆಂಟ್ ವಿರುದ್ಧ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ಗಳನ್ನು ದಾಖಲಿಸಲಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ದೂರಿನ ಆಧಾರದ ಮೇಲೆ ಸಿಬಿಐ ಈ ಪ್ರಕರಣಗಳನ್ನು ದಾಖಲಿಸಿದೆ.
ಸಂಸ್ಕರಣೆ, ಮೌಲ್ಯಮಾಪನ, ಆಂತರಿಕ ರೇಟಿಂಗ್ ಮತ್ತು ಸಮರ್ಥ ಪ್ರಾಧಿಕಾರದಿಂದ ನಿಯಮಿತ ಅನುಮತಿ ಮತ್ತು ಅಡಮಾನವನ್ನು ರಚಿಸದೆ ಎಲ್ಸಿಗಳನ್ನು ತೆರೆಯುವ ಮೂಲಕ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪಬ್ಲಿಕ್ ಸರ್ವೆಂಟ್ರೊಂದಿಗೆ ಖಾಸಗಿ ಕಂಪನಿಗಳು ಈ ವಂಚನೆಯನ್ನು ಕಾರ್ಯಗತಗೊಳಿಸಿದೆ.
ಮೊದಲ ಪ್ರಕರಣವನ್ನು ಜುಲೈ 29, 2019 ರಂದು ದಾಖಲಿಸಲಾಗಿದೆ. ಖಾಸಗಿ ಕಂಪನಿಗಳು ಮತ್ತು ಅದರ ನಿರ್ದೇಶಕರು, ಹಣಕಾಸು ಸಲಹೆಗಾರ ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಮತ್ತು ನಂತರ ಬ್ಯಾಂಕಿನ ವಲಯ ಮುಖ್ಯಸ್ಥರಾಗಿದ್ದವರು ಸೇರಿದಂತೆ 13 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ.
ಮೊದಲ ಚಾರ್ಜ್‌ಶೀಟ್‌ನಲ್ಲಿ, ಹೆಸರಿಸಲಾದ ವ್ಯಕ್ತಿಗಳು ಸುಮಾರು 56.98 ಕೋಟಿ ರೂ.ಗಳ ಬ್ಯಾಂಕ್‌ಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅದೇ ಪ್ರಕರಣದಲ್ಲಿ ನೋಂದಾಯಿಸಲಾದ ಎರಡನೇ ಪ್ರಕರಣದಲ್ಲಿ, 16 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದ್ದು, 50 ಕೋಟಿ ರೂ. ಗಳ ಬ್ಯಾಂಕ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೂರನೇ ಪ್ರಕರಣವನ್ನು ಮಾರ್ಚ್ 9, 2020 ರಂದು ದಾಖಲಿಸಲಾಗಿದ್ದು, 42.91 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಆರೋಪದ ಮೇಲೆ 16 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ.
ತನಿಖೆಯ ಸಮಯದಲ್ಲಿ, ಸಾಲಗಾರ ಕಂಪನಿಗಳು ಸುಳ್ಳು ಮತ್ತು ಕಟ್ಟುಕಥೆಯ ತೆರಿಗೆ ಇನ್‌ವಾಯ್ಸ್‌ಗಳು, ವಿನಿಮಯದ ಬಿಲ್‌ಗಳು ಮತ್ತು ನಕಲಿ ರಶೀದಿಗಳನ್ನು ವಿವಿಧ ಬ್ಯಾಂಕುಗಳಿಂದ ಎಲ್‌ಸಿ ರಿಯಾಯಿತಿ ಮಾಡುವಾಗ ಸಲ್ಲಿಸಿದವು ಎಂದು ತಿಳಿದುಬಂದಿದೆ.
ಕಂಪೆನಿಗಳ ಗುಂಪಿನ ಅಧ್ಯಕ್ಷರು ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದು, ಮೂವರು ಸಾಲಗಾರರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಸೌಲಭ್ಯವನ್ನು ತಮ್ಮ ನೌಕರರೊಬ್ಬರ ಮೂಲಕ ಸುಳ್ಳು ಮತ್ತು ಕಲ್ಪಿತ ಹಣಕಾಸು ಡೇಟಾವನ್ನು ಸಲ್ಲಿಸುವ ಮೂಲಕ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಆರೋಪಿ ತನ್ನ ನೌಕರರನ್ನು ವಿವಿಧ ಹೆಸರಿನ ಸರಬರಾಜುದಾರ ಕಂಪನಿಗಳಲ್ಲಿ ನಿರ್ದೇಶಕರನ್ನಾಗಿ ಮಾಡಿ ಸುಳ್ಳು ಮತ್ತು ಕಟ್ಟುಕಥೆಯ ತೆರಿಗೆ ಇನ್‌ವಾಯ್ಸ್‌ಗಳು, ವಿನಿಮಯದ ಬಿಲ್‌ಗಳು ಮತ್ತು ನಕಲಿ ಲಾರಿ ರಶೀದಿಗಳನ್ನು ಅವರ ಮೂಲಕ ಸಲ್ಲಿಸಿದ್ದು, ಸಾಲದ ಆದಾಯವನ್ನು ತನ್ನ ನೌಕರರ ಮೂಲಕ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಿಡ್ನಿ ಸ್ಟೋನ್ ಸಮಸ್ಯೆಗೆ ಬೀಟ್ರೂಟ್ ನ ಮನೆಮದ್ದುhttps://t.co/eee6aOjFG0
— Saaksha TV (@SaakshaTv) April 8, 2021
ಉರಿಬಿಸಿಲಿಗೆ ತಂಪಾದ ಬೂದು ಕುಂಬಳಕಾಯಿ ಜ್ಯೂಸ್https://t.co/trQ50Lcaki
— Saaksha TV (@SaakshaTv) April 8, 2021
ತಂಪಾದ ಆರೋಗ್ಯಕರ ರಾಗಿ ಅಂಬಲಿ#raagi #healthy #cooking #saakshatv https://t.co/uHFsZgf2ck
— Saaksha TV (@SaakshaTv) April 3, 2021
ನೆಹ್ವಾಲ್ ಅವರ ನೈಜ ಆಟದ ಚಿತ್ರಣ ‘ಸೈನಾ’ ಚಿತ್ರದಲ್ಲಿಲ್ಲ !https://t.co/qRp7c66FMy
— Saaksha TV (@SaakshaTv) April 7, 2021
#UnionBankofIndia #CBIfiles #chargesheets