ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಬಂಧನೆಗಳು ಹೆಚ್ಚಾದ ಪರಿಣಾಮ ಮೊದಲ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಬರೋಬ್ಬರಿ 12.6 % ನಷ್ಟ ಅನುಭವಿಸಿದೆ. ನಿಬಂಧನೆಗಳು ಹೆಚ್ಚಾದ ಪರಿಣಾಮ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ತ್ರೈಮಾಸಿಕದ ನಿವ್ವಳ ಲಾಭದಲ್ಲಿ 12.6%ರಷ್ಟು ಕುಸಿತವಾಗಿರುವ ಬಗ್ಗೆ ಸಂಸ್ಥೆ ಹೇಳಿಕೊಂಡಿದೆ.
3 ಬ್ಯಾಂಕ್ ಗಳು ವಿಲೀನಗೊಂಡ ಬಳಿಕ ಈ ಬದಲಾವಣೆಯಾಗಿದೆ ಎನ್ನಲಾಗುತ್ತಿದೆ. ಜೂನ್ 30 ಕ್ಕೆ ಕೊನೆಯ ಮೂರು ತಿಂಗಳಲ್ಲಿ ಬ್ಯಾಂಕ್ ನಿವ್ವಳ ಲಾಭ 333 ಕೋಟಿ ದಾಟಿತ್ತು. ಆದ್ರೆ, ಇದು ಹಿಂದಿನ ವರ್ಷದ ಅವಧಿಯಲ್ಲಿ 381 ಕೋಟಿಯಿತ್ತು. ಏಕೀಕೃತ ಆಧಾರದ ಮೇಲೆ, ಈ ಬ್ಯಾಂಕುಗಳು ಮಾರ್ಚ್ ತ್ರೈಮಾಸಿಕದಲ್ಲಿ, 7,157 ಕೋಟಿ ನಿವ್ವಳ ನಷ್ಟವನ್ನ ಅನುಭವಿಸಿರುವುದಾಗಿ ಹೇಳಿಕೊಮಡಿದೆ.