ಕೇಂದ್ರ ಬಜೆಟ್ 2021 | ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ
ನವದೆಹಲಿ : ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ಘೋಷಣೆ ಮಾಡಿದ್ದಾರೆ.
ಈ ದಶಕದ ಮೊದಲ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡುತ್ತಿರುವ ಅವರು, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ 64,180 ಕೋಟಿ ಮೀಸಲಿಟ್ಟಿದ್ದಾರೆ. ಮುಂದಿನ ಆರು ವರ್ಷಗಳಲ್ಲಿ 64,180 ಕೋಟಿ ವೆಚ್ಚ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಅದೇ ರೀತಿ ಆರೋಗ್ಯ ಕ್ಷೇತ್ರಕ್ಕೆ ಶೇಕಡಾ 137ರಷ್ಟು ಹೆಚ್ಚು ಅನುದಾನ, ನಗರ ಸ್ವಚ್ಛ ಭಾರತಕ್ಕೆ 1.41 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ನಗರದ ಜಲಜೀವನ ಮಿಷನ್ ಯೋಜನೆ ಜಾರಿ ಸೇರಿದಂತೆ ಸ್ವಚ್ಛ ಭಾರತ ಅಡಿಯಲ್ಲಿ ಪ್ಲಾಸ್ಟಿಕ್ ನಿಯಂತ್ರಿಸಲು ಒತ್ತು7 ಜವಳಿ ಪಾರ್ಕ್ ಗಳ ನಿರ್ಮಾಣ ಯೋಜನೆ. 9 ಬಯೋ ಸೇಫ್ಟಿ ಲ್ಯಾಬ್ ಗಳ ಸ್ಥಾಪನೆಗೆ ಒತ್ತು ನೀಡಿದ್ದಾರೆ.
ತಮ್ಮ ಬಜೆಟ್ ನಲ್ಲಿ ಹೊಸ ಹೆಲ್ತ್ ಇನ್ಫ್ರಾ ಯೋಜನೆ ಘೋಷಿಸಿರುವ ಹಣಕಾಸು ಸಚಿವೆ, ಈ ಯೋಜನೆಗೆ 61 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ನೂತನ ಸ್ಕ್ರ್ಯಾಪ್ ನೀತಿ ಘೋಷಣೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









