ಕೇಂದ್ರ ಬಜೆಟ್ 2021 | ಬೆಂಗಳೂರಿಗೆ ಬಂಪರ್
ನವದೆಹಲಿ : ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಬೆಂಗಳೂರು 2ನೇ ಹಂತದ ಮೆಟ್ರೋಗೆ 14788 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
ಈ ದಶಕದ ಮೊದಲ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡುತ್ತಿರುವ ಅವರು, ಬೆಂಗಳೂರಿನ 2 ನೇ ಹಂತದ ಮೆಟ್ರೋಗೆ ಅನುದಾನ ಘೋಷಣೆ ಮಾಡಿದ್ದಾರೆ.
58.19 ಕಿಲೋಮೀಟರ್ ಉದ್ಧದ ಮೆಟ್ರೋ ರೈಲ್ವೆ ಮಾರ್ಗ ಮತ್ತು ಮೆಟ್ರೋನ 2ಎ ಮತ್ತು 2ಬಿ ಹಂತಕ್ಕೆ 14788 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ.
ಇದಲ್ಲದೆ ತಮಿಳುನಾಡಿಗೆ ಮಧುರೈ-ಕೊಲ್ಲಂ ಕಾರಿಡಾರ್ ಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕೇರಳದಲ್ಲಿ 1,100 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆ ಘೋಷಿಸಿದ್ದಾರೆ.
11 ರಾಜ್ಯಗಳ 3,382ರಲ್ಲಿ ಲ್ಯಾಬ್ ಗಳ ನಿರ್ಮಾಣ ಯೋಜನೆ. 20 ಮಹಾನಗರಗಳಲ್ಲಿ ರೋಗ ನಿಯಂತ್ರಣ ಕೇಂದ್ರ ಸ್ಥಾಪನೆ. 32 ವಿಮಾನ ನಿಲ್ದಾಣಗಳಲ್ಲಿ, 11 ಸೀ ಪೋರ್ಟ್ ಗಳಲ್ಲಿ ಆರೋಗ್ಯ ಕೇಂದ್ರ.
50 ತುರ್ತು ಆಪರೇಷನ್ ಕೇಂದ್ರ, 2 ಮೊಬೈಲ್ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









