ಕೇಂದ್ರ ಬಜೆಟ್ 2021: ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್..! ಲಕ್ಷಾಂತರ ಮಂದಿಗೆ ಕೆಲಸದ ಭರವಸೆ
ಕೇಂದ್ರ ಬಜೆಟ್ 2021ರಲ್ಲಿ ದೇಶದಲ್ಲಿ ಜವಳಿ ಉತ್ಪಾದನೆ ಹೆಚ್ಚಳ ಹಾಗೂ ರಫ್ತು ಉತ್ತೇಜಿಸಲು, 7 ಮೆಗಾ ಜವಳಿ ಪಾರ್ಕ್ ನಿರ್ಮಾಣದ ಘೋಷಣೆಯನ್ನ ನಿರ್ಮಲಾ ಸೀತಾರಾಮ್ ಅವರು ಮಾಡಿದ್ದಾರೆ.
ಕೇಂದ್ರ ಬಜೆಟ್ 2021: ಸ್ವಚ್ಛ ಭಾರತ ಮಿಷನ್ ಗೆ 1.41 ಲಕ್ಷ ರೂ.
ಭಾರತ ಜವಳಿ ರಫ್ತು ದೇಶವಾಗಲಿ ಎಂಬ ಉದ್ದೇಶದಿಂದ ಈ ಘೋಷಣೆ ಮಾಡಲಾಗಿದ್ದು, 3 ವರ್ಷಗಳಲ್ಲಿ ಮೆಗಾ ಜವಳಿ ಪಾರ್ಕ್ ನಿರ್ಮಾಣವಾಗಲಿದೆ.
ಜವಳಿ ಸಚಿವಾಲಯ ಮೆಗಾ ಇಂಟಿಗ್ರೇಟೆಡ್ ಜವಳಿ ಮತ್ತು ಉಡುಪು ಪಾರ್ಕ್ ಸ್ಥಾಪನೆ ಪ್ರಸ್ತಾಪವಿಟ್ಟಿತ್ತು. ಜವಳಿ ಉದ್ಯಮದ ವ್ಯವಹಾರವನ್ನು 22 ಸಾವಿರ ಕೋಟಿಗೆ ಹೆಚ್ಚಿಸುವುದು ಜವಳಿ ಸಚಿವಾಲಯದ ಉದ್ದೇಶವಾಗಿದೆ. ಇಂಟಿಗ್ರೇಟೆಡ್ ಟೆಕ್ಸ್ಟೈಲ್ ಪಾರ್ಕನ್ನು ಸರ್ಕಾರ 2005ರಲ್ಲಿ ಪ್ರಾರಂಭಿಸಿದೆ. ಅಂತರರಾಷ್ಟ್ರೀಯ ಮಾನದಂಡಗಳ ಆಧಾರದ ಮೇಲೆ, ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಲು ಒಂದೇ ಸ್ಥಳದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಕೇಂದ್ರ ಬಜೆಟ್ 2021: 9 ಕೋಟಿ ಜನರಿಗೆ ಉಜ್ವಲ ಯೋಜನೆ ವಿಸ್ತರಣೆ..!
ಈ ಕ್ಷೇತ್ರದಲ್ಲಿ 11 ಕೋಟಿ ಜನರು ಕೆಲಸ ಮಾಡ್ತಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಅನೇಕರು ಕೆಲಸ ಕಳೆದಕೊಂಡಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಈಗ 7 ಮೆಗಾ ಜವಳಿ ಪಾರ್ಕ್ ಘೋಷಣೆ ಮಾಡಿದ್ದು,ಲಕ್ಷಾಂತರ ಮಂದಿಗೆ ಕೆಲಸ ಸಿಗುವ ಸಾಧ್ಯತೆಯಿದೆ.
ಕೇಂದ್ರ ಬಜೆಟ್ 2021 | ಡಿಸೆಂಬರ್‍ನಲ್ಲಿ ಮಾನವರಹಿತ ಗಗನಯಾನ ಯೋಜನೆ
ಕೇಂದ್ರ ಬಜೆಟ್ 2021 : ಪಿಎಂ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನೆ ಘೋಷಣೆ..!
ಕೇಂದ್ರ ಬಜೆಟ್ 2021 : ಮನೆ ಕಟ್ಟೋರಿಗೆ ಭರ್ಜರಿ ಗುಡ್ ನ್ಯೂಸ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








