ಕೇಂದ್ರ ಬಜೆಟ್ 2021 | ಡಿಸೆಂಬರ್‍ನಲ್ಲಿ ಮಾನವರಹಿತ ಗಗನಯಾನ ಯೋಜನೆ
ನವದೆಹಲಿ : ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಕೊಡುಗೆ ನೀಡಲಾಗಿದ್ದು,ಡಿಸೆಂಬರ್ ನಲ್ಲಿ ಮಾನವರಹಿತ ಗಗನಯಾನ ಯೋಜನೆ ರೂಪಿಸಿಕೊಂಡಿದೆ. ಇದಕ್ಕೆ ನಾಲ್ವರು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ಕೊಡಿಸಲಾಗುವುದು. ಇದಲ್ಲದೆ ನಿರ್ಮಲಾ ಸೀತಾರಾಮನ್ ಅವರು ಮನೆ ನಿರ್ಮಾಣದ ಕನಸುಳ್ಳವರಿಗೆ ಗಿಫ್ಟ್ ನೀಡಿದ್ದು, ಅಗ್ಗದ ಗೃಹಸಾಲ ಮುಂದುವರೆಸಿದ್ದಾರೆ.
ಇದಲ್ಲದೇ ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಹಿರಿಯ ನಾಗರಿಕರಿಗೆ ಟ್ಯಾಕ್ಸ್ ಫ್ರೀ ಮಾಡಿದ್ದಾರೆ.

75 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ನೇರ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಕೇಂದ್ರ, 5 ಕೋಟಿ ವಹಿವಾಟಿನ ಟ್ರಸ್ಟ್ ಗಳಿಗೆ ತೆರಿಗೆ ವಿನಾಯಿತಿ ನೀಡಿದೆ.
ಇದೇ ವೇಳೆ ಯುವಕರ ಕೌಶಲ್ಯಾಭಿವೃದ್ದಿಗೆ 3 ಸಾವಿರ ಕೋಟಿ ಘೋಷಣೆ ಮಾಡಲಾಗಿದ್ದು, ದೇಶದಲ್ಲಿ 750 ಏಕಲವ್ಯ ಮಾದರಿ ಶಾಲೆಗಳ ಆರಂಭ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನ ಕೇವಲ ಕೆಲವೇ ರಾಜ್ಯಗಳಿಗೆ ಮೀಸಲಿದ್ದ ಸ್ವಾಮಿತ್ವ ಯೋಜನೆಯನ್ನು ಎಲ್ಲಾ ರಾಜ್ಯಗಳಿಗೆ ವಿಸ್ತರಣೆ ಮಾಡಲಾಗಿದೆ. ಇದರಿಂದ ಗ್ರಾಮೀಣ ಮಂದಿಗೆ ಆಸ್ತಿ ಮೇಲಿನ ಹಕ್ಕು ಸಿಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







